ಆರ್.ಎಂ. ಮಂಜುನಾಥ ಗೌಡ ವಿರುದ್ದ ಇಡಿ ಪ್ರತ್ಯೇಕ ಪ್ರಕರಣ

Kranti Deepa

ಬೆಂಗಳೂರು,ಜೂ.09 :  ಶಿವಮೊಗ್ಗ ಜಿಲ್ಲಾ ಸಹಕಾರ ಬ್ಯಾಂಕ್‌ನಲ್ಲಿ ನಡೆದಿರುವ ನಕಲಿ ಚಿನ್ನಾಭರಣ ಅಡಮಾನ ಪ್ರಕರಣ ಸಂಬಂಧ ಬ್ಯಾಂಕ್‌ನ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದೆ. ಹಣ ಅಕ್ರಮ ವರ್ಗಾವಣೆ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಿರುವುದಾಗಿ ಇ.ಡಿ ತಿಳಿಸಿದೆ.

ಜೂನ್ 9 ರಂದು ವಿಶೇಷ ನ್ಯಾಯಾಲಯ ದ ಮುಂದೆ ಪ್ರತ್ಯೇಕ ಪ್ರಕರಣ ದಾಖಲು ಮಾಡಿರುವುದಾಗಿ ಇ.ಡಿ ತಿಳಿಸಿದೆ.

ಈವರೆಗೂ ಶಿವಮೊಗ್ಗ ಪೊಲೀಸರು ಮತ್ತು ಲೋಕಾಯುಕ್ತದಲ್ಲಿ ದಾಖಲಾಗಿದ್ದ ಪ್ರಕರಣಗಳ ಆಧಾರದಲ್ಲಿ ತನಿಖೆ ನಡೆಸ ಲಾಗುತಿತ್ತು. ಈಗ ಇ.ಡಿ. ಪ್ರತ್ಯೇಕ ಪ್ರಕರಣ ದಾಖಲಿಸಿರುವುದು ಆರ್.ಎಂ.ಮಂಜು ನಾಥ ಗೌಡ ಅವರಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ.

62.77  ಕೋಟಿಯ ನಕಲಿ ಚಿನ್ನಾಭರಣ ಅಡಮಾನ ಪ್ರಕರಣದಲ್ಲಿ ಜಾರಿ ನಿರ್ದೇಶನಾ ಲಯವು ಏಪ್ರಿಲ್ 9 ರಂದು ಮಂಜುನಾಥ ಗೌಡ ಅವರನ್ನು ಬಂಸಿತ್ತು. ಈಚೆಗೆ ಮಂಜುನಾಥ ಗೌಡ ಮತ್ತು ಅವರ ಪತ್ನಿಗೆ ಸೇರಿದ 13.91  ಕೋಟಿ ರೂ. ವೆಚ್ಚದ ಸ್ಥಿರ ಮತ್ತು ಚರ ಆಸ್ತಿಯನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು.

Share This Article
";