ಶಿವಮೊಗ್ಗ,ಏ.25 : ನಗರದ ಜೆಪಿಎನ್ ರಸ್ತೆಯಲ್ಲಿ ಇದುವರೆಗು ಕಾರ್ಯ ನಿರ್ವಹಿಸುತ್ತಿದ್ದ, ಆಭರಣ ಜ್ಯುವೆಲರ್ಸ್ ಶೋರೂಮ್ ಇಲ್ಲಿನ ಕುವೆಂಪು ರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ನವೀಕೃತ ಶೋರೂಮ್‌ಗೆ ಏ.29 ರಂದು ಸ್ಥಳಾಂತರಗೊಳ್ಳಲಿದೆ.
ಆಭರಣ ಬ್ರಾಂಡ್‌ನ ಪಯಣದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿ ಹೊರಹೊಮ್ಮಲಿರುವ ಈ ಶೋರೂಮ್ ಅಂದು ಬೆಳಿಗ್ಗೆ 11-00 ಗಂಟೆಗೆ ಸಂಪ್ರದಾಯ ಸೊಗಡಿನೊಂದಿಗೆ ಮತ್ತು ಆಧುನೀಕತೆಯ ಮೆರಗು, ವಿನ್ಯಾಸಗಳೊಂದಿಗೆ ಗ್ರಾಹಕರಿಗೆ ಅನಾವರಣಗೊಳ್ಳಿದೆ.
ವಿಶ್ವಾಸ, ಕುಶಲತೆ ಮತ್ತು ಚಿರ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ‘ದಿ ಒರಿಜಿನಲ್ ಆಭರಣ’ (The Original Abharan), ತನ್ನ ಶಿವಮೊಗ್ಗದ ಹೆಮ್ಮೆಯ ಶೋರೂಮ್ ಬಂಗಾರ, ವಜ್ರ ಮತ್ತು ಮದುವೆಯ ಆಭರಣಗಳ ಆಯ್ದ ಸಂಗ್ರಹಗಳನ್ನು ಒಳಗೊಂಡಿದ್ದು, ಉತ್ತಮ ಗ್ರಾಹಕ ಸೇವೆ ಮತ್ತು ಆಧುನಿಕ ಶೈಲಿಯನ್ನು ಹೊಂದಿದೆ.ಗ್ರಾಹಕರು, ಪೋಷಕರು ಮತ್ತು ಹಿತೈಷಿಗಳು ಈ ಮಹತ್ವದ ಆಚರಣೆಯಲ್ಲಿ ಭಾಗವಹಿಸಲು ‘ಆಭರಣ’ ಪರಿವಾರ ಆತ್ಮೀಯ ಆಹ್ವಾನ ನೀಡಿದೆ.
