ತೀರ್ಥಹಳ್ಳಿಯಲ್ಲಿ ಬಿಯರ್ ಕುಡಿಯಲ್ಲ ಎಂದಿದ್ದಕ್ಕೆ ಸ್ನೇಹಿತನ ಮೇಲೆ ಚಾಕುವಿನಿಂದ ಇರಿದ ಮಿತ್ರ

Kranti Deepa
ತೀರ್ಥಹಳ್ಳಿ , ಜೂ.29 :  ತೀರ್ಥಹಳ್ಳಿಯ ಕುರುವಳ್ಳಿ ಬಳಿ ಸ್ನೇಹಿತನೊಬ್ಬ ಬಿಯರ್​ ಕುಡಿಯಲ್ಲ ಎಂದಿದ್ದಕ್ಕೆ ಚಾಕು ತೆಗೆದುಕೊಂಡು ಚುಚ್ಚಿಬಿಟ್ಟಿದ್ದಾನೆ.
ತೀರ್ಥಹಳ್ಳಿಯ ಕುರುವಳ್ಳಿ ಬಾರ್​​ ಒಂದರಲ್ಲಿ ವ್ಯಕ್ತಿಯೊಬ್ಬ ಬಿಯರ್​​ ಕುಡಿಲಿಲ್ಲ ಅನ್ನೋ ವಿಚಾರಕ್ಕೆ ಸ್ನೇಹಿತನ ಮೇಲೆ ಚಾಕುವಿನಿಂದ  ಇರಿದಿದ್ದಾನೆ. ಈ ವಿಚಾರವಾಗಿ ತೀರ್ಥಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೂಲಿ ಕೆಲಸಗಾರ. ಈತ ಎಲ್ಲರಂತೆ ಕೆಲಸ ಮಾಡಿ ಮನೆಗೆ ಬಂದು ಮೈಕೈ ನೋವಿಗೆ ಸ್ವಲ್ಪ ಬಿಯರ್ ಕುಡಿಯೋಣ ಅಂತ ಕುರುವಳ್ಳಿ ಬಾರ್​ ಒಂದಕ್ಕೆ ಹೋಗಿದ್ದಾರೆ. ನಂತರ ಒಬ್ಬರೇ ಬಿಯರ್​ ಕುಡಿಯುತ್ತಾ ಕುಳಿತಿದ್ದಾರೆ. ಈ ಸಂದರ್ಭದಲ್ಲಿ  ಹಳೆ ಸ್ನೇಹಿತನೊಬ್ಬ ಬಾರ್‌ನಲ್ಲಿ  ಎದುರಾಗಿದ್ದಾನೆ. ಆತ ನನ್ನ ನೋಡಿದವನೇ ತಮಾಷೆಗೆಂದು ಬಾರೋ ನಾನೇ ನಿನಗೆ ಬಿಯರ್​ ಕೊಡಿಸ್ತೀನಿ, ನೀನು ಕುಡಿಬೇಕು ಎಂದು ಒತ್ತಾಯಿಸಿದ್ದಾನೆ.
ಆಗ ಬೀಯರ್​ ಬೇಡವೆಂದು ಸ್ನೇಹಿತನ ಆಫರ್​ನ್ನು ನಯವಾಗಿಯೇ ನಿರಾಕರಿಸಿದ್ದಾನೆ. ಆಗ ಕೆರಳಿದ ಸ್ನೇಹಿತ, *ನಾನು ಕೊಡ್ಸಿದ್ರೆ ನೀನು ಕುಡಿಯಲ್ಲ, ಬೇರೆಯವರು ಕೊಡ್ಸಿದ್ರೆ ಕುಡಿತೀಯಾ ಅಂತ ಜಗಳ ತೆಗೆದಿದ್ದಾನೆ.* ಇದನ್ನ ಗಮನಿಸಿ  ಇಲ್ಲಿದ್ದರೆ ಸರಿ ಆಗಲ್ಲ ಅಂತ ಬಾರ್​ನಿಂದ ಹೊರಡಲು ಸಿದ್ದರಾಗಿದ್ದಾರೆ. ಆದರೆ ಈ ವೇಳೆ ಕೋಪಗೊಂಡ ಆರೋಪಿ ಹಾಗೂ ಆತನ ಜತೆಗಿದ್ದ ಇನ್ನೊಬ್ಬಾತ  ಬಿಯರ್ ಬಾಟಲ್​ನಿಂದ ಹಲ್ಲೆ ಮಾಡೋಕೆ ಮುಂದಾಗಿದ್ದಾರೆ. ಆಗ ಅಂಜನಪ್ಪ ಹೇ ನನಗೆ ಹೊಡಿಯೋಕೆ ಬರ್ತಿಯಾ, ನಿನ್ನ ಅಣ್ಣನಿಗೆ ಹೇಳ್ತೇನೆ ಎಂದಿದ್ದಾರೆ. ಇದರಿಂದ ಮತ್ತಷ್ಟು ಸಿಟ್ಟಾದ  ಆರೋಪಿ ನೀನು ಬದ್ಕಿದ್ರೆ ತಾನೇ ನಿನ್ನ ಅಣ್ಣನಿಗೆ ಹೇಳೋದು ಅಂತ ಚಾಕನ್ನು ಚುಚ್ಚಲು ಮುಂದಾಗಿದ್ದಾನೆ.
ಈ ವೇಳೆ  ತಪ್ಪಿಸಿಕೊಂಡಿದ್ದಾರೆ. ಆದರೂ ಸಹ ಚಾಕು ಅವರ ಬೆನ್ನಿಗೆ ತಾಗಿ ಗಾಯಗಳಾಗಿವೆ. ಆಗ  ಕೂಗಿಕೊಂಡಾಗ ಬಾರ್ ಮಾಲೀಕರು, ಕ್ಯಾಶಿಯರ್ ಮತ್ತು ಅಕ್ಕಪಕ್ಕದವರು ಉಪಚರಿಸಿ  ಜೆ.ಸಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

Share This Article
";