ಶಿವಮೊಗ್ಗ, ಜೂ.06 : ತಲೆ ಮೇಲೆ ಕ್ರೇನ್ ಹರಿದು ಕಾರ್ಮಿಕರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಗರದ ಹೊಸಮನೆ ಬಡಾವಣೆಯ 3ನೇ ಕ್ರಾಸ್‌ನಲ್ಲಿ ಘಟನೆ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಉಪ್ಪಿನಂಗಡಿ ಸಮೀಪದ ಪಿಲಿಗೂಡು ಗ್ರಾಮದ ನಿವಾಸಿ ನಾಗೇಶ್ (48) ಮೃತ ದುರ್ದೈವಿ. ಹೊಸಮನೆಯಲ್ಲಿರುವ ದೊಡ್ಡಮ್ಮ ದೇವಾಲಯದ ಗೋಪುರ ನಿರ್ಮಾಣ ಕೆಲಸಕ್ಕಾಗಿ ನಾಗೇಶ್ ಅವರು ಶುಕ್ರವಾರ ಊರಿನಿಂದ ಶಿವಮೊಗ್ಗಕ್ಕೆ ಬಂದಿದ್ದರು ಎನ್ನಲಾಗಿದೆ.
ದೇವಾಲಯದ ಮುಂಭಾಗದಿಂದ ಕಲ್ಲುಗಳನ್ನು ಎತ್ತಿಕೊಂಡು ಕ್ರೇನ್ ರಿವರ್ಸ್ ಹೋಗುತ್ತಿತ್ತು. ಆಗ ನಾಗೇಶ್ ಅವರು ಎಡವಿ ಬಿದ್ದಿದ್ದಾರೆ. ಕ್ರೇನ್‌ನ ಮುಂಭಾಗದ ಚಕ್ರಗಳು ನಾಗೇಶ್ ಅವರ ಮೇಲೆ ಹರಿದಿದೆ. ತಲೆ ಮೇಲೆ ಹರಿದ್ದಿದ್ದರಿಂದ ತಲೆ ಭಾಗ ಛಿದ್ರವಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದೊಡ್ಡಪೇಟೆ ಠಾಣೆ ಪೊಲೀಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
