ಅತ್ಯಾಚಾರ : 20 ವರ್ಷ ಜೈಲು

Kranti Deepa
ಕಲಬುರಗಿ,ಜೂ.18 : 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಮಲತಂದೆಗೆ ನಗರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್  (ವಿಶೇಷ ಪೋಕ್ಸೊ) ನ್ಯಾಯಾಲಯವು 20ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ರೂ.25 ಸಾವಿರ ದಂಡ ವಿಧಿಸಿದೆ.
ನಗರದ ಸಬರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯ ಬಡಾವಣೆಯೊಂದರಲ್ಲಿ 2025 ರ ಜೂನ್ 14 ರಂದು ರಾತ್ರಿ ಹೆಂಡತಿ ನಿದ್ರೆ ಮಾಡಿದ ಬಳಿಕ ಮಲತಂದೆಯು ಮಗಳನ್ನು ಬೇರೆ ಕೋಣೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಹೆಂಡತಿ ಎದ್ದು ನೋಡಿದಾಗ ಮಗಳು ಪತಿಯ ಕೊಠಡಿಯಲ್ಲಿದ್ದಳು. ತಾಯಿ ವಿಚಾರಿಸಿದಾಗ, ನೀನು ಇಲ್ಲದ ವೇಳೆ ಮಲತಂದೆ ಐದಾರು ಬಾರಿ ಅತ್ಯಾಚಾರ ಮಾಡಿದ್ದಾನೆ ಎಂದು ಮಗಳು ತಿಳಿಸಿದ್ದಾಳೆ. ಬಳಿಕ ತಾಯಿಯು ಸಬರ್ಬನ್ ಪೊಲೀಸ್ ಠಾಣೆಯಲ್ಲಿ ಪತಿಯ ವಿರುದ್ಧ ಪೋಕ್ಸೊ ಕಾಯ್ದೆಯಡಿ ದೂರು ನೀಡಿದ್ದರು.

Share This Article
";