ಬೆಂಗಳೂರು,ಜೂ.18 : ವಿಧಾನ ಪರಿಷತ್‌ನ 7 ಸ್ಥಾನಗಳಿಗೆ ಗುರುವಾರ ಚುನಾವಣೆ ನಡೆದು ಕಾಂಗ್ರೆಸ್‌ನ ಐವರು, ಬಿಜೆಪಿ ಇಬ್ಬರು ಚುನಾಯಿತ ರಾದರು. ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿ ದಿದ್ದ ಜೆಡಿಎಸ್‌ನ ಗೋವಿಂದರಾಜು ಸೋಲ ನುಭವಿಸಿದರು. ತೀವ್ರ ಕುತೂಹಲ ಕೆರಳಿಸಿದ್ದ ಕಾಂಗ್ರೆಸ್‌ನ 5 ನೇ ಅಭ್ಯರ್ಥಿಯ ಆಯ್ಕೆಗೆ ಗುರುವಾರ ಸ್ಪಷ್ಟ ಉತ್ತರ ಸಿಕ್ಕಿದ್ದು, ಕಾಂಗ್ರೆಸ್ ವಿನಯ್ ಕಾರ್ತಿಕ್ ಗೆಲುವು ಸಾಧಿಸಿದ್ದಾರೆ.
ಗೆದ್ದ ಕಾಂಗ್ರೆಸ್ ಅಭ್ಯರ್ಥಿಗಳು : ಬಿ.ಕೆ.ಹರಿಪ್ರಸಾದ್: ಪಡೆದ ಮತಗಳು 30, ತಿಪ್ಪಣ್ಣಪ್ಪ ಕಮಕನೂರು: 30 ಮತ, ಪಿ.ವಿ. ಮೋಹನ್: 29 ಮತ, ಬಿ.ಎಸ್.ಶಿವಣ್ಣ: 30 ಮತ, ವಿನಯ್ ಕಾರ್ತಿಕ್ (5 ನೇ ಅಭ್ಯರ್ಥಿ): 32 ಮತಗೆದ್ದ ಬಿಜೆಪಿ ಅಭ್ಯರ್ಥಿಗಳು: ಆರ್.ರಘು: 29 ಮತಗಳು, ಲಿಂಗರಾಜು ಪಾಟೀಲ್: 27 ಮತ ಸೋತ ಜೆಡಿಎಸ್ ಮೈತ್ರಿ ಅಭ್ಯರ್ಥಿ : ಗೋವಿಂದರಾಜು: ಪಡೆದ ಮತಗಳು 14.
222 ಮತಗಳ ಪೈಕಿ ಒಂದು ಮತ ಅಸಿಂಧುವಾಗಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ 11 ಹೆಚ್ಚುವರಿ ಮತಗಳು ಸಿಕ್ಕಿವೆ. ಬಿಜೆಪಿಯ 7 ಮತ್ತು ಜೆಡಿಎಸ್‌ನ 4 ಶಾಸಕರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಚಲಾಯಿಸಿದ್ದಾರೆ. ಕ್ರಾಸ್ ವೋಟಿಂಗ್ ಪರಿಣಾಮ ಬಿಜೆಪಿಯ ಲಿಂಗರಾಜು ಪಾಟೀಲ್ ಗೆಲುವಿನ ಕೋಟಾ ತಲುಪಿರಲಿಲ್ಲ. ಅಭ್ಯರ್ಥಿ ಗೆಲ್ಲಲು 27.63 ಮತ ಪಡೆಯಬೇಕು. ಆದರೆ, ಲಿಂಗರಾಜ ಪಾಟೀಲ್ 27 ಮತಗಳನ್ನು ಪಡೆದಿದ್ದರು. ಎಲಿಮಿನೇಷನ್ ರೌಂಡ್‌ನಲ್ಲಿ ಲಿಂಗರಾಜು ಪಾಟೀಲ್‌ಗೆ ಗೆಲುವು ಸಾಸಿದ್ದಾರೆ.
ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ನ 5 ನೇ ಅಭ್ಯರ್ಥಿ ಗೆಲುವು ಸಾಧಿಸಿದ್ದು ಜೆಡಿಎಸ್ ಅಭ್ಯರ್ಥಿಗೆ ಸೋಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕಾರ್ತಿಕ್ ಗೆ 32 ಮತಗಳು ಸಿಕ್ಕಿದ್ದರೆ ಜೆಡಿಎಸ್‌ನ ಗೋವಿಂದರಾಜುಗೆ ಕೇವಲ 14 ಮತಗಳು ಮಾತ್ರ ಬಂದಿವೆ. ಜೆಡಿಎಸ್‌ನಿಂದ 6 ಹಾಗೂ ಬಿಜೆಪಿಯಿಂದ 3 ಶಾಸಕರು ಅಡ್ಡ ಮತದಾನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
