ಶಿವಮೊಗ್ಗದ ಕೆಲವು ರೈಲುಗಳ ಸಂಚಾರದಲ್ಲಿ ಬದಲಾವಣೆ

Kranti Deepa
ಶಿವಮೊಗ್ಗ, ಜೂ.10 :ಬೀರೂರು – ಶಿವಮೊಗ್ಗ ಟೌನ್ ನಿಲ್ದಾಣಗಳ ಮಧ್ಯೆ ಲೈನ್ ಬ್ಲಾಕ್ ಹಾಗೂ ಪವರ್ ಬ್ಲಾಕ್ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆ ಈ ಮಾರ್ಗದ ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ರೈಲ್ವೆ ಮೈಸೂರು ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಗಿರೀಶ ಧರ್ಮರಾಜ ಕಲಗೊಂಡ ತಿಳಿಸಿದ್ದಾರೆ.
* ರೈಲು 1
ಮೈಸೂರು–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16225): ಜೂನ್ 12 ಮತ್ತು 13ರಂದು ಮಾರ್ಗ ಮಧ್ಯೆ 35 ನಿಮಿಷ ನಿಯಂತ್ರಣಕ್ಕೆ ಒಳಪಡಲಿದೆ. ಜೂನ್ 14 ರಿಂದ 30ರವರೆಗೆ 55 ನಿಮಿಷ ಹಾಗೂ ಜುಲೈ 1 ರಿಂದ 5ರವರೆಗೆ ಮಾರ್ಗಮಧ್ಯೆ 30 ನಿಮಿಷ ನಿಯಂತ್ರಣಕ್ಕೆ ಒಳಪಡಲಿದೆ.
* ರೈಲು 2
ಶಿವಮೊಗ್ಗ ಟೌನ್–ಯಶವಂತಪುರ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 20690): ಜುಲೈ 7 ರಿಂದ 11ರವರೆಗೆ ಮಾರ್ಗಮಧ್ಯೆ 30 ನಿಮಿಷ ನಿಯಂತ್ರಣಕ್ಕೆ ಒಳಪಡಲಿದೆ.
* ರೈಲು 3
ಶಿವಮೊಗ್ಗ ಟೌನ್–ಯಶವಂತಪುರ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 20690): ಜುಲೈ 1 ರಿಂದ 5ರವರೆಗೆ ಶಿವಮೊಗ್ಗ ಟೌನ್ ನಿಲ್ದಾಣದಿಂದ ನಿಗದಿತ ಸಮಯಕ್ಕಿಂತ 20 ನಿಮಿಷ ತಡವಾಗಿ ಹೊರಡಲಿದೆ.

Share This Article
";