ಶಿವಮೊಗ್ಗ,ಜೂ.24 : ನಗರದ ಕುವೆಂಪು ರಸ್ತೆಯ ಜೈಲ್ ಸರ್ಕಲ್ ಸಮೀಪ ನೂತನ ವಾಗಿ ಸ್ಥಳಾಂತರಗೊಂಡಿರುವ ’ದ ಒರಿಜಿನಲ್ ಆಭರಣ’ (The Original Abharan) ತನ್ನ ಗ್ರಾಹಕರಿಗಾಗಿ ವಿಶೇಷ ಆಫರ್ ಅನ್ನು ಘೋಷಿಸಿದೆ. ಜೂನ್ 24 ರಿಂದ 26 ರವರೆಗೆ, ‘ಅವಿನಾಭಾವ ಕಲೆಕ್ಷನ್’ ಸೇರಿದಂತೆ ಸಂಪೂರ್ಣ ಚಿನ್ನ ಮತ್ತು ವಜ್ರಾಭರಣಗಳ ಶ್ರೇಣಿಯ ಮೇಲೆ ಶೇ.೦ ಮೇಕಿಂಗ್ ಚಾರ್ಜಸ್ ಸೌಲಭ್ಯವನ್ನು ಗ್ರಾಹಕರು ಪಡೆಯಬಹುದಾಗಿದೆ.
೯೦ ವರ್ಷಗಳ ವಿಶ್ವಾಸ, ಪರಿಶುದ್ಧತೆ ಮತ್ತು ಅಪ್ರತಿಮ ಕರಕುಶಲತೆಯ ಪರಂಪರೆಯನ್ನು ಹೊಂದಿರುವ ‘ದ ಒರಿಜಿನಲ್ ಆಭರಣ’, ತನ್ನ ನೂತನ ಹಾಗೂ ವಿಶಾಲ ಶೋರೂಮ್ ಮೂಲಕ ಶಿವಮೊಗ್ಗದ ಗ್ರಾಹಕರಿಗೆ ಇನ್ನಷ್ಟು ಐಷಾರಾಮಿ ಹಾಗೂ ಸುಲಭವಾದ ಖರೀದಿ ಅನುಭವವನ್ನು ಒದಗಿಸುತ್ತಿದೆ.
ಮದುವೆ, ಹಬ್ಬ-ಹರಿದಿನಗಳು ಹಾಗೂ ವಿಶೇಷ ಸಂದ ರ್ಭಗಳಿಗಾಗಿ ಚಿನ್ನ ಮತ್ತು ವಜ್ರಾಭರಣ ಖರೀದಿಸಲು ಯೋಜಿಸುತ್ತಿರುವವರಿಗೆ ಈ ಆಫರ್ ಸುವರ್ಣಾವಕಾಶ ವಾಗಿದೆ. ಪಾರಂಪರಿಕ ವಿನ್ಯಾಸಗ ಳಿಂದ ಹಿಡಿದು ಅತ್ಯಾಧುನಿಕ ಆಭರ ಣಗಳವರೆಗೆ, ವಿಶಾಲ ಸಂಗ್ರಹವನ್ನು ಗ್ರಾಹಕರು ಈ ಸಂದರ್ಭದಲ್ಲಿ ವೀಕ್ಷಿಸಿ ಖರೀದಿಸಬಹುದಾಗಿದೆ.
ಈ ಕುರಿತು ಮಾತನಾಡಿದ ಸಂಸ್ಥೆಯ ಪ್ರತಿನಿಗಳು, ‘ಶಿವಮೊಗ್ಗದ ಗ್ರಾಹಕರು ನಮ್ಮ ಮೇಲೆ ತೋರಿರುವ ಪ್ರೀತಿ ಮತ್ತು ವಿಶ್ವಾಸಕ್ಕೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಈ ವಿಶೇಷ ಆಫರ್ ಅನ್ನು ಪರಿಚಯಿಸಿದ್ದೇವೆ. ನಮ್ಮ ನೂತನ ಶೋರೂಮ್ನಲ್ಲಿ ಪ್ರತಿಯೊಬ್ಬ ಗ್ರಾಹಕರಿಗೂ ವಿಶಿಷ್ಟ ಖರೀದಿ ಅನುಭವವನ್ನು ನೀಡಲು ನಾವು ಬದ್ಧರಾಗಿದ್ದೇವೆ’ ಎಂದು ತಿಳಿಸಿದ್ದಾರೆ.
ಈ ವಿಶೇಷ ಆಫರ್ ಜೂನ್ 24 ರಿಂದ 26 ರವರೆಗೆ ಮಾತ್ರ ಲಭ್ಯವಿದ್ದು, ಗ್ರಾಹಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ‘ದ ಒರಿಜಿನಲ್ ಆಭರಣ’ ಮನವಿ ಮಾಡಿದೆ.
ನಿಯಮಗಳು ಮತ್ತು ಷರತ್ತುಗಳು ಅನ್ವಯ. ಕಲ್ಲಿನ ಮೌಲ್ಯ ಮತ್ತು ಜಿಎಸ್ಟಿ ಹೆಚ್ಚುವರಿಯಾಗಿ ಅನ್ವಯಿಸುತ್ತದೆ.
