ದಿನಗೂಲಿ ನೌಕರರ ಖಾಯಂ ಮಾಡದಿದ್ದರೆ ರಾಷ್ಟ್ರ ಭವನಕ್ಕೆ ಮುತ್ತಿಗೆ: ಡಾ. ಹೆಚ್.ಎಸ್.ನಾಗೇಂದ್ರ ಹೆದ್ದೂರು

Kranti Deepa
ಶಿವಮೊಗ್ಗ/ದೆಹಲಿ : ಎಲ್ಲಾ ರಾಜ್ಯದ ಡಿ ಗ್ರೂಪ್ ನೌಕರರ 8 ನೇ ವೇತನ ಮತ್ತು 11 ಬೇಡಿಕೆಗಳನ್ನು ಹಾಗೂ ದಿನಗೂಲಿ ನೌಕರರು, ಹೊರಗುತ್ತಿದಾರರನ್ನು ಖಾಯಂ ಮಾಡದಿದ್ದರೆ ರಾಷ್ಟçಪತಿ ಭವನಕ್ಕೆ ಮುತ್ತಿಗೆ ಹಾಕುವುದಾಗಿ ಫೆಡರೇಶನ್‌ನ ರಾಷ್ಟ್ರೀಯ ನಾಯಕ ಡಾ ಹೆಚ್.ಎಸ್.ನಾಗೇಂದ್ರ ಹೆದ್ದೂರು ಕೇಂದ್ರ ಸರ್ಕರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನವದೆಹಲಿಯ ಜಂತರ್ ಮಂತರ್ ನಲ್ಲಿ ನಡೆದ ಬೃಹತ್ ಪ್ರತಿಭಟನಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಇದು ಕೇವಲ ದೆಹಲಿಯ ಹೋರಾಟವಲ್ಲ. ಸರ್ಕಾರ ನಮ್ಮ ತಾಳ್ಮೆಯನ್ನು ಪರೀಕ್ಷಿಸಬಾರದು ಎಂದರು.
ಎಲ್ಲಾ ರಾಜ್ಯದಲ್ಲೂ ಡಿ ಗ್ರೂಫ್ ನೌಕರರ 8 ನೇ ವೇತನ ಹಾಗೂ 11 ಬೇಡಿಕೆಗಳನ್ನು ಹಾಗೂ ದಿನಗೂಲಿ ನೌಕರರು, ಅಂಗನವಾಡಿ ಶಿಕ್ಷಕರು, ಅಂಗನವಾಡಿ ಸಹಾಯಕರು, ಹೊರಗುತ್ತಿಗೆ ನೌಕರರನ್ನು ಹಳೆ ಪಿಂಚಣಿ ಯೋಜನೆ (ಒಪಿಎಸ್) ಕಾಂಟ್ರಾಕ್ಸ್ ಬೇಸಿಕ್, ಹೊರಗುತ್ತಿಗೆದಾರರು, ಗ್ರಾಮ ಸಹಾಯಕರು, ವಿ.ಎ. ಸಹಾಯಕರು, ಕ್ಷೇಮಾಭಿವೃದ್ದಿಯವರು ಎಲ್.ಎಸ್. ನೀರುಗುಂಟಿಗಳು ಹಾಗೂ ಹೊರಗುತ್ತಿಗೆಯಲ್ಲಿರುವ ಡಾಕ್ಟರ್‌ಗಳು ಹಾಗೂ ಎಲ್ಲಾ ದಿನಗೂಲಿ ನೌಕರರ ಬೇಡಿಕೆಯಾಗಿದೆ.
ಎಲ್ಲಾ ಇಲಾಖೆಯ ದಿನಗೂಲಿ ನೌಕರರಿಗೆ ಸರ್ಕಾರದಿಂದ ಖಾಯಂ ಮಾಡಬೇಕು ಮತ್ತು ಸರ್ಕಾರದ ಸವಲತ್ತು ಕೊಡಬೇಕು. ಇಲ್ಲದಿದ್ದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮಿರದವರೆಗೆ 26 ರಾಜ್ಯಗಳಿಂದ ರಾಷ್ಟ್ರ ಭವನಕ್ಕೆ ಮುತ್ತಿಗೆ ಹಾಕುವುದಾಗಿ ಆಲ್ ಇಂಡಿಯಾ ಸ್ಟೇಟ್ ಗವರ್ನಮೆಂಟ್ ಡಿ. ಗ್ರೂಪ್ ನೌಕರರ ಪೆಡರೇಶನ್ ನ ಆಲ್ ಇಂಡಿಯಾ ಉಪಾಧ್ಯಕ್ಷ ಹಾಗೂ ಆಲ್ ಇಂಡಿಯಾ ಕಾರ್ಯದರ್ಶಿ ಕರ್ನಾಟಕ ರಾಜಾಧ್ಯಕ್ಷ ಡಾ. ಹೆಚ್.ಎಸ್. ನಾಗೇಂದ್ರ ಹೆದ್ದೂರು ಕೇಂದ್ರ ಸರ್ಕಾರಕ್ಕೆ ಸಲಹೆ ಕೊಟ್ಟು ಖಡಕ್ ಎಚ್ಚರಿಕೆ ನೀಡಿದರು.
ಸರ್ಕಾರಿ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ಹೊರಗುತ್ತಿಗೆ ಹಾಗೂ ಎಲ್ಲಾ ದಿನಗೂಲಿ ನೌಕರರನ್ನೇ ಖಾಯಂ ನೇಮಕ ಮಾಡಬೇಕೆಂದು ಸಲಹೆ ಮತ್ತು ಎಚ್ಚರಿಕೆ ನೀಡಿದ್ದಾರೆ.
ಬೇಡಿಕೆ ಈಡೇರದಿದ್ದರೆ ದೇಶವ್ಯಾಪ್ತಿ ಮುಷ್ಕರ ಅನಿವಾರ್ಯ ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ನವದೆಹಲಿ ಜಂತರ್ ಮಂತರ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಫೆಡರೇಶನ್‌ನ ರಾಷ್ಟ್ರೀಯ ನಾಯಕರಾದ ಡಾ. ಹೆಚ್.ಎಸ್.ನಾಗೇಂದ್ರ ಹೆದ್ದೂರು ಅವರ ನೇತೃತ್ವದಲ್ಲಿ ಗಣೇಶನ್, ನಟರಾಜನ್, ಶರ್ಮಾಜಿ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು.
26 ರಾಜ್ಯಗಳಿಂದ ಲಕ್ಷಾಂತರ ನೌಕರರು ದೆಹಲಿ ರಾಮ್ ಲೀಲಾ ಮೈದಾನದಲ್ಲಿ ಕೆಂಪು ಧ್ವಜಗಳೊಂದಿಗೆ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಡಿ ದರ್ಜೆಯ ನೌಕರರು ಸೇರಿದಂತೆ  ವಿವಿದ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ದಿನಗೂಲಿ ನೌಕರರು ತಮ್ಮ ಸಮಸ್ಯೆ ಗಳಿಗೆ ಮೊ. ನಂ. 9448145538 ನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Share This Article
";