ಜೂನ್ 14: ನ್ಯಾಶನಲ್ ಗೋಲ್ಡ್, ಡೈಮಂಟ್ಸ್ ಶೋರೂಂ ಆರಂಭ

module:1facing:0; ?hw-remosaic: 0; ?touch: (-1.0, -1.0); ?modeInfo: ; ?sceneMode: 32768; ?cct_value: 0; ?AI_Scene: (-1, -1); ?aec_lux: 0.0; ?hist255: 0.0; ?hist252~255: 0.0; ?hist0~15: 0.0; ?module:1facing:0; hw-remosaic: 0; touch: (-1.0, -1.0); modeInfo: ; sceneMode: 32768; cct_value: 0; AI_Scene: (-1, -1); aec_lux: 0.0; hist255: 0.0; hist252~255: 0.0; hist0~15: 0.0;
Kranti Deepa

ಶಿವಮೊಗ್ಗ,ಜೂ.12  : ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್ ಸಂಸ್ಥೆಯು ತನ್ನ ಶೋ ರೂಮ್ ಅನ್ನು ನಗರದ ಬಿ ಹೆಚ್ ರಸ್ತೆಯ ವಿನಾಯಕ ಮಾಲ್ ಎದುರು ಜೂನ್ 14 ರಂದು ಆರಂಭಿಸಲಿದೆ .

ಪ್ರೆಸ್ ಟ್ರಸ್ಟಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಂಸ್ಥೆಯ ಪಾಲುದಾರ ಯೂಸುಫ್ ಹೈದರ್, ತೀರ್ಥಹಳ್ಳಿಯ ಎರಡು ದಶಕಗಳಿಂದ ಚಿನ್ನಾಭರಣ ವ್ಯವಹಾರ ಸೇವೆಯಲ್ಲಿ ಸಂಸ್ಥೆ ತನ್ನನ್ನು ತೊಡಗಿಸಿಕೊಂಡಿದೆ. ಈಗ ಜಿಲ್ಲಾ ಕೇಂದ್ರ ಶಿವಮೊಗ್ಗದಲ್ಲಿ ತನ್ನ ಶೋರೂಮ್ ಅನ್ನು ಜೂನ್ 14 ರಂದು ಬೆಳಿಗ್ಗೆ 10 ಗಂಟೆಗೆ ಆರಂಭಿಸಲಿದೆ. ನ್ಯಾಷನಲ್ ಗ್ರೂಪ್ ತೀರ್ಥಹಳ್ಳಿಯ ಸ್ಥಾಪಕ  ಹಾಜಿ ಶೇಖ್ ಅಹಮದ್ ಶೋರೂಮ್ ಅನ್ನು ಉದ್ಘಾಟಿಸುವರು. ಅತಿಥಿಗಳಾಗಿ ಸಮಾಜದ ಪ್ರಮುಖ ಗಣ್ಯರು ಮತ್ತು ಪ್ಯಾಶನ್ ಪ್ರಿಯರು ಆಗಮಿಸುವರೆಂದರು.

ಸಂಪೂರ್ಣ ಹವಾನಿಯಂತ್ರಿತ ಶೋರೂಮ್ ಇದಾಗಿದ್ದು, ವಿವಿಧ ರೀತಿಯ ಆಭರಣಗಳ, ಚಿನ್ನಾಭರಣಗಳ ಸಂಗ್ರಹವಾಗಿದೆ. ಮದುವೆ ಆಭರಣಗಳ ಸಂಗ್ರಹ, ವಜ್ರಾಭರಣವನ್ನು, ರತ್ನ ಖಚಿತ ಅಮೂಲ್ಯ ಆಭರಣಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದೆ. ಉಡುಗೊರೆ ನೀಡಲು,  ಆಂಟಿಕ್, ಬೆಳ್ಳಿಯ ಆಭರಣ, ಬೆಳ್ಳಿಯ ಸಾಮಗ್ರಿಗಳ ಸಂಗ್ರಹ ಮತ್ತು ವಾಚ್‌ಗಳ ಮಾರಾಟ ಮತ್ತು ಪ್ರದರ್ಶನ ಇರಲಿದೆ ಎಂದರು.

ಉದ್ಘಾಟನೆ ನಂತರ 1.50 ಲಕ್ಷ ಮೇಲ್ಪಟ್ಟ ಖರೀದಿಗೆ ಉಚಿತ ಚಿನ್ನದ ನಾಣ್ಯ, 30,000 ಮೇಲ್ಪಟ್ಟು ಖರೀದಿಗೆ ಬೆಳ್ಳಿಯ ನಾಣ್ಯ, 10,000 ಮೇಲ್ಪಟ್ಟ ಖರೀದಿಗೆ ಗೃಹ ಉಪಕರಣದ ಉಡುಗೊರೆಯನ್ನು ಉಚಿತವಾಗಿ ನೀಡಲಾಗುವುದು. ಜೊತೆಗೆ ಲಕ್ಕಿ ಡೀಪ್ ಇರುತ್ತದೆ. ಸೆಪ್ಟೆಂಬರ್ 14 ರ ವರೆಗೆ 5,000 ಮೇಲ್ಪಟ್ಟು ವಾಚ್ ಖರೀದಿಯೊಂದಿಗೆ ಒಂದು ಉಚಿತ ಕೂಪನನ್ನು ಕೊಡಲಾಗುವುದು.

ಇದರಲ್ಲಿ  ಬುಲೆಟ್ ಬೈಕ್ ಗೆಲ್ಲುವ ಅವಕಾಶವಿದೆ. ಜೂನ್ 21 ಮತ್ತು 28 ರಂದು 10,000 ಚಿನ್ನಾಭರಣ ಅಥವಾ ಬೆಳ್ಳಿ ಖರೀದಿಯೊಂದಿಗೆ ಉಚಿತ ಕೂಪನ್‌ನೊಂದಿಗೆ ಸ್ಕೂಟರ್ ಗೆಲ್ಲುವ ಅವಕಾಶವಿದೆ ಎಂದು ವಿವರಿಸಿದರು. ತಮ್ಮ ನ್ಯಾಶನಲ್ ಸಂಸ್ಥೆ ಸಾಮಾಜಿಕ ಸ್ಪಂದನೆಯನ್ನು ಮಾಡುತ್ತಿದ್ದು, ಎಂಟು ವರ್ಷದಿಂದ ಸುಮಾರು 80 ಲಕ್ಷ ವಿದ್ಯಾರ್ಥಿ ವೇತನವನ್ನು ನೀಡಿದೆ. ಕ್ರೀಡೆ ಮತ್ತು ಆರೋಗ್ಯ ಕ್ಷೇತ್ರಕ್ಕೂ ಸಾಮಾಜಿಕ ಸ್ಪಂದನೆ ನೀಡಿದೆ ಎಂದು ವಿವರಿಸಿದರು.

Share This Article
";