ಶಿವಮೊಗ್ಗ ,ಜೂ.12: ನಗರದ ಗಾಂಧಿ ಬಜಾರ್( ಲಷ್ಕರ್ ಮೊಹಲ್ಲಾ)ದಲ್ಲಿ ಶುಕ್ರವಾರ ಸಂಜೆ ನಡೆದ ಭೀಕರ ಹತ್ಯೆ ನಗರದಲ್ಲಿ ಆತಂಕ ಮೂಡಿಸಿದೆ. ಲಭ್ಯವಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ರೌಡಿ ಹಿನ್ನೆಲೆ ಹೊಂದಿದ್ದ ಎನ್ನಲಾದ ನರಸಿಂಹ ಎಂಬಾತನನ್ನು ದುಷ್ಕರ್ಮಿಗಳು ಮಚ್ಚು, ಲಾಂಗ್‌ಗಳಂತಹ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ.
ಮಾಹಿತಿಯಂತೆ, ಗಾಂಧಿ ಬಜಾರ್‌ನಲ್ಲಿದ್ದ ವೇಳೆ ಅಂಬು ಮತ್ತು ಆತನ ಸಹಚರರು ಎನ್ನಲಾದ ಗುಂಪು ದಾಳಿ ನಡೆಸಿ ಬಳಿಕ ಪರಾರಿ ಯಾಗಿದೆ ಎಂದು ಹೇಳಲಾಗಿದೆ. ಸ್ಥಳಕ್ಕೆ ಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ತನಿಖೆ ಆರಂಭಿಸಿದ್ದಾರೆ.
ಮೃತ ನರಸಿಂಹ ಕಾಡಾ ಕಾರ್ತಿಕನ ಆಪ್ತ ಸಹಚರನಾಗಿದ್ದ ಎನ್ನಲಾಗಿದ್ದು, ಕೆಲವು ಅಪರಾಧ ಪ್ರಕರಣಗಳಲ್ಲೂ ಆತನ ಹೆಸರು ಕೇಳಿಬಂದಿತ್ತು ಎಂದು ತಿಳಿದುಬಂದಿದೆ. ಆದರೆ ಈ ಕುರಿತು ಅಕೃತ ದೃಢೀಕರಣ ಇನ್ನಷ್ಟೇ ಆಗಬೇಕಿದೆ.
ಇದೇ ವೇಳೆ, ಈ ಇಸ್ಪೀಟ್ ಅಡ್ಡೆಯನ್ನು “ಪಾತಾಳಿ ” ಎಂಬ ರೌಡಿ ಶೀಟರ್ ವ್ಯಕ್ತಿ ನಡೆಸುತ್ತಿದ್ದ ಎನ್ನುವ ಮಾಹಿತಿ ಸ್ಥಳೀಯ ವಲಯಗಳಲ್ಲಿ ಹರಿದಾಡುತ್ತಿದೆ. ಆದರೆ ಈ ಮಾಹಿತಿಯನ್ನು ಪೊಲೀಸರು ಅಕೃತವಾಗಿ ದೃಢಪಡಿಸಿಲ್ಲ. ಹತ್ಯೆಗೆ ಇಸ್ಪೀಟ್ ಅಡ್ಡಿಯ ಚಟುವಟಿಕೆಗಳು ಅಥವಾ ಇತರೆ ವೈಷಮ್ಯ ಕಾರಣವೇ ಎಂಬುದು ತನಿಖೆಯಿಂದಷ್ಟೇ ಸ್ಪಷ್ಟವಾಗಬೇಕಿದೆ.
ಪ್ರಕರಣದ ಎಲ್ಲ ಆಯಾಮಗಳನ್ನು ಪರಿಗಣಿಸಿ ಕೋಟೆ ಪೊಲೀಸರು ತನಿಖೆ ಮುಂದುವರಿಸಿದ್ದು, ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.
