ಕುಕ್ಕರ್ ಬಾಂಬ್ ಸೋಟ : ಉಗ್ರ ಶಾರೀಖ್‌ಗೆ 10 ವರ್ಷ ಜೈಲು

Kranti Deepa
ಬೆಂಗಳೂರು,ಏ.27 : ಮಂಗಳೂರಿನ ಕುಕ್ಕರ್ ಬಾಂಬ್ ಸೋಟ ಪ್ರಕರಣದಲ್ಲಿ ಉಗ್ರ ಶಾರೀಖ್‌ಗೆ  10 ವರ್ಷ ಜೈಲು ಶಿಕ್ಷೆ ವಿಸಿ ಎನ್‌ಐಎ ಸ್ಪೆಷಲ್ ಕೋರ್ಟ್ ಆದೇಶ ಹೊರಡಿಸಿದೆ.
ಸೆಕ್ಷನ್ 121 ಎ, ಸೆಕ್ಷನ್ 122, ಸೆಕ್ಷನ್ 326 ಹಾಗೂ ಯುಎಪಿಎ ಸೇರಿದಂತೆ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಕೋರ್ಟ್ 10 ವರ್ಷ ಕಠಿಣ ಶಿಕ್ಷೆ, 10 ಸಾವಿರ ದಂಡ ವಿಸಿದೆ. ಓರ್ವ ಮಗಳಿದ್ದಾಳೆ, ಮನೆಯಲ್ಲಿ ದುಡಿ ಯುವವನು ನಾನೊಬ್ಬನೇ. ಹೀಗಾಗಿ ಶಿಕ್ಷೆ ಕಡಿಮೆ ಮಾಡುವಂತೆ ಶಾರೀಖ್ ಮನವಿ ಮಾಡಿದ್ದಾನೆ. ಅಲ್ಲದೇ, ಶಿವಮೊಗ್ಗ ಜೈಲಿಗೆ ಶಿಫ್ಟ್ ಮಾಡುವಂತೆಯೂ ಶಾರಿಕ್ ಮನವಿ ಮಾಡಿದ್ದಾನೆ.
ಇದೇ ವೇಳೆ, ಜೈಲಿಗೆ ಸೇರಿ ಮೂರು ವರ್ಷ ಆಯ್ತು.. ಔಷ ಎಲ್ಲಾ ಸರಿಯಾಗಿ ತೆಗೆದುಕೊಳ್ಳಲು ಆಗ್ತಾ ಇಲ್ಲ.. ಕುಟುಂಬವನ್ನು ಭೇಟಿ ಮಾಡಲು ಸಾಧ್ಯ ವಾಗ್ತಿಲ್ಲ. ಹೀಗಾಗಿ, ಶಿವಮೊಗ್ಗ ಜೈಲಿಗೆ ಶಿಫ್ಟ್ ಮಾಡಲು ಶಾರೀಖ್ ಕೋರ್ಟ್ ಮುಂದೆ ಬೇಡಿಕೊಂಡ.
ಆದರೆ, ಇದನ್ನು ಪುರಸ್ಕರಿಸದ ನ್ಯಾಯಾಶರು, ಬೆಂಗಳೂರಿನಲ್ಲಿ ಆರೋಗ್ಯಕ್ಕೆ ಸಂಬಂಸಿದ ಎಲ್ಲಾ ಸೌಲಭ್ಯ ಇದೆ. ಶಿವಮೊಗ್ಗಕ್ಕಿಂತ ಚೆನ್ನಾಗಿಯೇ ಇದೆ ಎಂದು ಮನವಿಯನ್ನು ತಿರಸ್ಕರಿಸಿದರು. ಕೋರ್ಟ್‌ಗೆ ಮೂರು ತಿಂಗಳ ಹಿಂದೆ ಶಾರೀಖ್ ತಪ್ಪೊಪ್ಪಿಗೆ ಅರ್ಜಿ ಸಲ್ಲಿಸಿದ್ದ. ಶಾರಿಕ್ ಅರ್ಜಿ ಪುರಸ್ಕರಿಸಿದ್ದ ಎನ್‌ಐಎ ಸ್ಪೆಷಲ್ ಕೋರ್ಟ್  ಅಪರಾ ಉಗ್ರ ಶಾರೀಖ್‌ಗೆ  ಶಿಕ್ಷೆ  ಪ್ರಕಟಿಸಿದೆ.

Share This Article
";