ಬೈಕ್ ನಿಂದ 15 ಸಾವಿರ ರೂ. ಕಳ್ಳತನ

Kranti Deepa

ಶಿವಮೊಗ್ಗ, ಏ.15 : ಈಜಲು ತೆರಳಿದ್ದ ವೇಳೆ ಕಳ್ಳರು ಬೈಕ್‌ನ ಸೀಟ್ ಮುರಿದು ಸಾವಿರಾರು ರೂಪಾಯಿ ಕಳ್ಳತನ ಮಾಡಿರುವ ಘಟನೆ ಇಲ್ಲಿನ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.ದೂರುದಾರರು ನಿನ್ನೆ ಸಂಜೆ ತಮ್ಮ ಮೊಪೆಡ್ ವಾಹನವನ್ನು ನದಿಯ ಬಳಿ ನಿಲ್ಲಿಸಿ ಈಜಾಡಲು ತೆರಳಿದ್ದರು.

ಹೊಳೆಯಲ್ಲಿ ಮಿಂದೆದ್ದು ಸ್ವಲ್ಪ ರಿಲ್ಯಾಕ್ಸ್ ಆಗಿ ಬಂದವರಿಗೆ ತಮ್ಮ ಬೈಕ್‌ನ್ನು ನೋಡಿ ಒಮ್ಮೆಲೆ ಶಾಕ್ ಎದುರಾಯಿತು. ಅದೇನೆಂದರೆ ಯಾರೋ ಕಳ್ಳರು ಮೊಪೆಡ್ ವಾಹನದ ಸೀಟ್‌ನ್ನು ಮುರಿದು ಬರೋಬ್ಬರಿ 15 ಸಾವಿರ ರೂಪಾಯಿ ಕಳ್ಳತನ  ಮಾಡಿಕೊಂಡು ಹೋಗಿದ್ದರು.

ಆ ಕೂಡಲೇ ಏನು ಮಾಡಬೇಕೆಂದು ತಿಳಿಯದ ದೂರುದಾರ ಕೂಡಲೇ 112 ಪೊಲೀಸ್ ಸಿಬ್ಬಂದಿಗಳಿಗೆ ಫೋನಾಯಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಸಿಬ್ಬಂದಿಗಳು ಅಕ್ಕ ಪಕ್ಕ ಎಲ್ಲೆಡೆ ಹುಡುಕಿದರು. ಆದರೆ ಎಲ್ಲಿಯೂ ಸಹ ಕಳ್ಳರ ಸುಳಿವು ಸಿಗದ ಕಾರಣ ದೂರುದಾರನನ್ನು ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸುವಂತೆ ಸೂಚಿಸಿದ್ದಾರೆ.

Share This Article
";