ಶಿವಮೊಗ್ಗ, ಮೇ, 28 : ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಕಟಕೋಳ ಪೊಲೀಸ್ ಠಾಣೆ ವ್ಯಾಪ್ತಿಯ ಜನನಿಬಿಡ ಪ್ರದೇಶ, ಸಂತೆ, ಜಾತ್ರೆ ನಡೆಯುವ ವಿವಿಧ ಗ್ರಾಮಗಳಲ್ಲಿ ಜನರ ಗಮನ ಬೇರೆಡೆ ಸೆಳೆದು ಮೊಬೈಲ್ ಕಳವು ಮಾಡುತ್ತಿದ್ದ 8 ಜನರನ್ನು ಕಟಕೋಳ ಪೊಲೀಸರು ಬಂಧಿಸಿದ್ದಾರೆ.
ಖಚಿತ ಮಾಹಿತಿ ಆಧರಿಸಿದ ಪೊಲೀಸರು ವಿಶೇಷ ತಂಡ ರಚಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರ ಮಾರ್ಗದರ್ಶನದಲ್ಲಿ ಶೋಧ ಕಾರ್ಯ ನಡೆಸಿದರು. ಬಂಧಿತರಿಂದ ಒಟ್ಟು 74.94 ಲಕ್ಷ ಮೌಲ್ಯದ ವಿವಿಧ ಕಂಪನಿಯ 40 ಮೊಬೈಲ್ ಫೋನ್‌ಗಳು ಹಾಗೂ 75.40 ಲಕ್ಷ ಮೌಲ್ಯದ ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಪ್ರಕರಣದಲ್ಲಿ ಭಾಗಿಯಾದ ಶಿವಮೊಗ್ಗ ಜಿಲ್ಲೆ ಭದ್ರಾವತಿ ಮೂಲದ ವಿಕಾಸ ವೆಂಕಟೇಶ ಭೋವಿ, ಕುಮಾರ ಪಾಪಣ್ಣ ಭೋವಿ, ಪ್ರವೀಣ ಮಂಜಪ್ಪ ಭೋವಿ, ಸಂತೋಷ ಗವಿಸ್ವಾಮಿ ಕುಂಡಾ, ಶಿವು ಯಲ್ಲಪ್ಪ ಭೋವಿ, ವೆಂಕಟೇಶ ಈರಪ್ಪ ಭೋವಿ, ಅಕ್ಷಯ ಗಣೇಶ ಎ.ಜಿ., ಮತ್ತು ಹುಬ್ಬಳ್ಳಿಯ ಸಚೀನ ಲಕ್ಷ್ಮಣ ಕಲ್ಲವಡ್ಡರ ಅವರನ್ನು ಬಂಧಿಸಿದ್ದಾರೆ.
