ಭದ್ರಾವತಿ, ಮೇ, 27 : ತಾಲೂಕಿನ ಜಂಕ್ಷನ್ ಬಳಿಯ ರಂಗನಾಥಪುರ ಗ್ರಾಮದ ಬಳಿ ಶಿವಮೊಗ್ಗ ಕಡೆಗೆ ಹೋಗಲು ಅತೀ ವೇಗವಾಗಿ ಚಾಲನೆ ಮಾಡುತ್ತಿದ್ದ ಕಾರು ಮರಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲಿ ಓರ್ವ ಮೃತ ಪಟ್ಟರೆ, ಕಾರು ಚಾಲಕನಿಗೆ ಕಾಲು ಜಖಂ ಆಗಿರುವ ಘಟನೆ ಬುಧವಾರ ನಡೆದಿದೆ.
ಜಂಕ್ಷನ್ ಕಡೆಯಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಫೋರ್ಡ್ ಕಾರು ರಂಗನಾಥಪುರ ಮತ್ತು ಲಕ್ಕಿನಕೊಪ್ಪ ಮದ್ಯ ಭಾಗದಲ್ಲಿ ಮಧ್ಯಾಹ್ನ 1.30 ರ ಸಮಯದಲ್ಲಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು ಚಲಿಸುತ್ತಿದ್ದ ಶಿವಮೊಗ್ಗಾದ ಲಷ್ಕರ್ ಮೊಹಲ್ಲಾದ ವಾದಿವುದ ವಾಸಿ ಫರ್ರಾನ್ (23 ) ಸ್ಥಳದಲ್ಲಿ ಮೃತ ಪಟ್ಟಿದ್ದಾರೆ.
ಕಾರಿನಲ್ಲಿದ್ದ ಮತ್ತೋರ್ವ ಮಹಮ್ಮದ್ ರಯಾನ್ (19 ) ಎಂಬುವರ ಕಾಲು ಮುರಿದಿದೆ. ಗಾಯಾಳನ್ನು ಶಿವಮೊಗ್ಗಾದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅತೀ ವೇಗವೇ ಅಪಘಾತಕ್ಕೆ ಕಾರಣವೆನ್ನಲಾಗಿದೆ. ಕಾರು ವೇಗವಾಗಿ ಮರಕ್ಕೆ ಗುದ್ದಿದ ಪರಿಣಾಮ ಕಾರು ನುಜ್ಜುಗುಜ್ಜಾಗಿದೆ. ಕಾರಿನ ಎಂಜಿನ್ ಮತ್ತಿತರೆ ಭಾಗಗಳು ಮುರಿದು ಹೊರ ಬಂದು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿದೆ. ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
