ನರಸಿಂಹ ಕೊಲೆ ಕೇಸ್ : ,ಅಂಬು, ಮಧು, ಕತ್ತೆ, ರವಿ, ಶಬರೀಶ್​ ಅರೆಸ್ಟ್

Kranti Deepa
ಶಿವಮೊಗ್ಗ ,ಜೂ.13 : ನಗರದ ಗಾಂಧಿ ಬಜಾರ್ ಸಮೀಪ ನಡೆದ ನರಸಿಂಹನ ಕೊಲೆ ಪ್ರಕರಣದಲ್ಲಿ ಶಿವಮೊಗ್ಗ ಪೊಲೀಸ ವಿಶೇಷ ತಂಡ ಐವರನ್ನು ಬಂಧಿಸಿದೆ.
ಇವತ್ತು ಬೆಳಗ್ಗೆ ಆರೋಪಿಗಳನ್ನ ಶಿವಮೊಗ್ಗ ಕೋಟೆ ಠಾಣೆಗೆ ಕರೆತರಲಾಗಿದೆ. ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಐವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದೆ.
ಅಡಿಷನಲ್​ ಎಸ್​ಪಿ ನೇತೃತ್ವದ ವಿಶೇಷ ತಂಡ ಕಾರ್ಯಾಚರಣೆ ಕೈಗೊಂಡ 24 ಗಂಟೆಯ ಒಳಗಾಗಿ ಆರೋಪಿಗಳನ್ನ ವಶಕ್ಕೆ ಪಡೆದಿದೆ.
ನಿನ್ನೆ ಶುಕ್ರವಾರ ಸಂಜೆ ನಾಲ್ಕು ಮುಕ್ಕಾಲರ ಹೊತ್ತಿಗೆ ಇಸ್ಪೀಟ್​ ಅಡ್ಡೆಯಲ್ಲಿ ಎಂಟ್ರಿ ಯಾಗಿದ್ದ ತಂಡ, ನರಸಿಂಹನನ್ನು ಹತ್ಯೆ ಮಾಡಿತ್ತು. ಈ ಪ್ರಕರಣ ಸಂಬಂಧ ಪೊಲೀಸರು, ಅಂಬು ಅನಿಲ್, ಮಧು, ರವಿ, ಹಾಗೂ ಕತ್ತೆ ಕಾರ್ತಿಕ್​, ಶಬರೀಶ್ ಸೇರಿದಂಥೆ ಐವರನ್ನು ಅರೆಸ್ಟ್ ಮಾಡಿದೆ. ಮುಂದಿನ ಕಾನೂನು ಪ್ರಕ್ರಿಯೆ ನಡೆಯುತ್ತಿದೆ.

Share This Article
";