ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿ ಸೆರೆ

Kranti Deepa

ಶಿವಮೊಗ್ಗ, ಏ.15 :  ಹಲವು ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ  ವಾರೆಂಟ್ ಆರೋಪಿ ಮಂಜುನಾಥ ಅಲಿಯಾಸ್ ನೇಪಾಳಿ ಮಂಜ ಎನ್ನುವನನ್ನು  ಬೆಂಗಳೂರಿನಲ್ಲಿ ಪತ್ತೆ ಹಚ್ಚಿ ದೊಡ್ಡಪೇಟೆ ಪೊಲೀಸರು ಬಂಧಿಸಿ ಕರೆತಂದಿದ್ದಾರೆ.

ಶಿವಮೊಗ್ಗದ ಮಂಜುಶ್ರೀ ನ್ಯಾಯಬೆಲೆ ಅಂಗಡಿ ಸಮೀಪದ ನಿವಾಸಿಯಾದ ಈತ, ಬೆಂಗಳೂರಿನ ಕ್ಲೌಡ್೯ ಆಸ್ಪತ್ರೆಯಲ್ಲಿ ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದ. ಈತನ ವಿರುದ್ಧ ದೊಡ್ಡಪೇಟೆ ಮತ್ತು ಜಯನಗರ ಪೊಲೀಸ್ ಠಾಣೆಗಳಲ್ಲಿ ಕೊಲೆ ಯತ್ನ, ದರೋಡೆ ಸಂಚು ಸೇರಿದಂತೆ ಸುಮಾರು ಆರು ಗಂಭೀರ ಪ್ರಕರಣಗಳು ದಾಖಲಾಗಿದ್ದು, ಹಲವು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿದ್ದ.

ದೊಡ್ಡಪೇಟೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸತ್ಯನಾರಾಯಣ್ ಮಾರ್ಗದರ್ಶನದಲ್ಲಿ, ಪಿಎಸ್‌ಐ ಎಮ್.ಎನ್. ಅಂಬಿಗೇರ್ ನೇತೃತ್ವದ ವಾರೆಂಟ್ ಸಿಬ್ಬಂದಿಗಳಾದ ಗೋವರ್ಧನ್ ಮತ್ತು ರವೀಂದ್ರ ಪ್ರಸಾದ್ ಅವರು ಏಪ್ರಿಲ್ 13 ರಂದು ಬೆಂಗಳೂರಿನಲ್ಲಿ ಆರೋಪಿಯನ್ನು ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ.

Share This Article
";