ಬೆಟ್ಟಿಂಗ್ ಮಾಡುತ್ತಿದ್ದ ಐವರು ಬಂಧನ : 37 ಸಾವಿರ ರೂ. ನಗದು ವಶ

Kranti Deepa

ಶಿವಮೊಗ್ಗ,ಮೇ .23: ನಗರದ ಆರ್‌ಎಂಸಿ ಯಾರ್ಡ್ ಹತ್ತಿರ ಶುಕ್ರವಾರ ರಾತ್ರಿ ಕಾರಿನಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿರುವವರನ್ನು ವಿನೋಬನಗರ ಪೊಲೀಸರು ಬಂಧಿಸಿದ್ದಾರೆ.
ಮಾಹಿತಿ ಬಂದ ಮೇರೆಗೆ, ಪಿಎಸ್‌ಐ ವಿನೋಬನಗರ ಠಾಣಾ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ನಡೆಸಿದರು  ಐವರು ಯುವಕರು ಕ್ರಿಕ್ ಲೈನ್ ಗುರು ಎಂಬ ಮೊಬೈಲ್ ಅಪ್ಲಿಕೇಷನ್ ಮುಖಾಂತರ ಆನ್‌ಲೈನ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದರು.

ಆರೋಪಿತರನ್ನು ದಸ್ತಗಿರಿ ಮಾಡಿ, ಅವರಿಂದ 35,000 ರೂ ನಗದು ಹಣ, ೭ ಮೊಬೈಲ್, ಎಸ್‌ಯುವಿ 300 ಕಾರ್ ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Share This Article
";