ಮನೆಯಲ್ಲಿ ನಗದು ಕಳ್ಳತನ : ಇಬ್ಬರ ಬಂಧನ

Kranti Deepa
ಶಿವಮೊಗ್ಗ, ಮೇ .30 : ಮನೆಗೆ‌ ನುಗ್ಗಿ ನಗದು ದೋಚಿ ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಶಿವಮೊಗ್ಗ ವಿನೋಬನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ನಗರದ ಕಾಶೀಪುರ ಲಕ್ಕಪ್ಪ ಲೇಔಟ್ ನ ಸೋಮಶೇಖರ್ ಎಂಬುವರ ಮನೆಯಲ್ಲಿ ಮೇ 26 ರಂದು ಕಳ್ಳತನವಾಗಿತ್ತು. ಮನೆಯಲ್ಲಿದ್ದ 7 ಲಕ್ಷ ನಗದು ದೋಚಿ ಕಳ್ಳರು ಪರಾರಿಯಾಗಿದ್ದರು‌. ಪ್ರಕರಣ ಸಂಬಂಧ ವಿನೋಬನಗರದಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಟಿಪ್ಪುನಗರದ ಮೊಹಮದ್ ಸಲೀಮ್ ಹಾಗೂ ಮೊಹಮದ್ ರಜಾಕ್ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ 5,13,000 ನಗದನ್ನ ಪೊಲೀಸರು ವಶಪಡಿಸಿಕೊಂಡಿದ್ದಾನೆ.
ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ನಿಖಿಲ್ ಬಿ. ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕಾರಿಯಪ್ಪ ಎ.ಜಿ. ಕೆಎಸ್‌ಪಿಎಸ್ ಹಾಗೂ ಶಿವಮೊಗ್ಗ ಉಪ ವಿಭಾಗ-ಬಿ ಪೊಲೀಸ್ ಉಪಾಧೀಕ್ಷಕರಾದ ಸಂಜೀವ್ ಕುಮಾರ್ ಟಿ.ಡಿ. ಅವರ ಮಾರ್ಗದರ್ಶನದಲ್ಲಿ ವಿನೋಬನಗರ ಪೊಲೀಸ್ ಠಾಣೆ ವತಿಯಿಂದ ವಿಶೇಷ ತಂಡವನ್ನು ರಚಿಸಲಾಗಿತ್ತು. ವಿನೋಬನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಸಂತೋಷಕುಮಾರ್ ಡಿ.ಕೆ. ಅವರ ಉಸ್ತುವಾರಿಯಲ್ಲಿ ಪೊಲೀಸ್ ಉಪನಿರೀಕ್ಷಕರಾದ ತಿರುಮಲೇಶ್ ಜಿ. ನೇತೃತ್ವದಲ್ಲಿ ಈ ತಂಡ ಕಾರ್ಯನಿರ್ವಹಿಸಿದ್ದಾರು.
ತಂಡದಲ್ಲಿ ಸಿಬ್ಬಂದಿಗಳಾದ ರಾಜು ಕೆ.ಆರ್. (ಸಿಪಿಸಿ), ಚಂದ್ರನಾಯ್ಕ ಬಿ. (ಸಿಪಿಸಿ), ಮಲ್ಲಪ್ಪ ಎಸ್.ಜಿ. (ಸಿಪಿಸಿ), ಅರುಣಕುಮಾರ್ ಎನ್.ಕೆ. (ಸಿಪಿಸಿ) ಹಾಗೂ ಮನುಶಂಕರ್ (ಸಿಪಿಸಿ) ಸೇರಿದಂತೆ ಇತರ ಸಿಬ್ಬಂದಿಗಳು ಸೇರಿದ್ದು, ಪ್ರಕರಣಗಳ ಶೀಘ್ರ ಪತ್ತೆಬ ಹಾಗೂ ಆರೋಪಿಗಳ ಬಂಧನಕ್ಕಾಗಿ ಕಾರ್ಯಾಚರಣೆ ಇದ್ದರು.

Share This Article
";