ಯುವಕ ಸೆರೆ: ಗಾಂಜಾ ವಶ

Kranti Deepa

 ಶಿವಮೊಗ್ಗ, ಮೇ, 27 :  ನಗರದ  ಮಂಜುನಾಥ ಬಡಾವಣೆಗೆ ಹೋಗುವ ರಸ್ತೆಯಲ್ಲಿ, ಕೆ ಎಸ್ ಆರ್ ಟಿ ಸಿ ಬಸ್ ಡಿಪೋ ಹಿಂಭಾಗದ ಖಾಲಿ ಮೈದಾನದಲ್ಲಿ  ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಪೊಲೀಸರು ತೆರಳಿ ಆತನ್ನು ಬಂಧಿಸಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಆರೋಪಿತ ಕಿಶೋರ್ (25 )  ನನ್ನು ದಸ್ತಗಿರಿ ಮಾಡಿ ಸುಮಾರು 35 ಸಾವಿರ ರೂ. ಮೌಲ್ಯದ 582 ಗ್ರಾಂ ತೂಕದ ಗಾಂಜಾವನ್ನು ಹಾಗೂ ಕೃತ್ಯದಿಂದ ಬಂದ 290 ರೂ ನಗದು ಹಣವನ್ನು ಅಮಾನತುಪಡಿಸಿಕೊಂಡು ಆತನ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Share This Article
";