ಪಿಯುನಲ್ಲಿ ಅತಿ ಹೆಚ್ಚು ಅಂಕಪಡೆದ ವಿದ್ಯಾರ್ಥಿನಿಯರಿಗೆ ಎಂ.ಶ್ರೀಕಾಂತ್ ಸನ್ಮಾನ

Kranti Deepa

ಶಿವಮೊಗ್ಗ,ಏ. 29 : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ  ಕಲಾ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದ ಬೃಂದಾ 590 (98.33) ಹಾಗೂ ವಾಣಿಜ್ಯ ವಿಭಾಗದ ರಂಜಿತಾ ಜಿ 596 (99.33)  ವಶಿಷ್ಟ ಎನ್.ಎಸ್.595 (99.17) ವಿಜ್ಞಾನ ವಿಭಾಗದ ಮಹಿನ್ ಖಾನಂ ಆಫ್ರಿದಿ 596(99.33 ) ಹಾಗೂ ಸೋನಿಯಾ ಅವರ ಮನೆಗೆ ಭೇಟಿ ನೀಡಿ ಸದ್ಭಾವನ ಟ್ರಸ್ಟ್ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ. ಶ್ರೀಕಾಂತ್  ಸನ್ಮಾನಿಸಿದರು.

ಅತಿ ಹೆಚ್ಚು ಅಂಕಪಡೆದ ಈ ಸಾಧಕ ರಿಗೆ ನಿಮ್ಮ ಮುಂದಿನ ಜೀವನ ಉತ್ತಮವಾಗಿ ಇರಲಿ ಇನ್ನಷ್ಟು ಹೆಚ್ಚಿನ ಅಧ್ಯಯನ ಮಾಡಿ ಉನ್ನತ ಹುದ್ದೆ ಅಲಂಕರಿಸಲೆಂದು   ಹಾರೈಸಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯೆ  ಯಮುನಾ ರಂಗೇಗೌಡ, ಶಿವಮೊಗ್ಗ ಯುವ ಕಾಂಗ್ರೆಸ್ ಮುಖಂಡ ವಿನಯ್ ತಾಂದಲೆ, ತಾಲೂಕು ಗ್ಯಾರಂಟಿ ಸಮಿತಿಯ ಸದಸ್ಯ  ಬಸವರಾಜ ಹಾಗೂ ಮಂಜುನಾಥ್ ನವುಲೆ, ಶಿವಮೊಗ್ಗ, ಜಿಲ್ಲಾ ಅಲೆಮಾರಿ ನಿಗಮದ ಅನುಷ್ಠಾನ ಸಮಿತಿಯ ಸದಸ್ಯ ಸಂದೀಪ್, ಶಿವಕುಮಾರ್, ಅನಿಲ್ ಆಚಾರ್, ಭರತ್, ಅವಿನಾಶ್, ಕುರುವಳ್ಳಿ ನಾಗರಾಜ್, ಆರೋಗ್ಯ ಸ್ಥಾಯಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Share This Article
";