ಸ್ವಾಮಿ ವಿವೇಕಾನಂದ ಪ್ರೌಢ ಶಾಲೆಯ ರಾಣಿ ಆಚಾರ್ಯಗೆ 9 ನೇ ರ್‍ಯಾಂಕ್

Kranti Deepa
ಶಿವಮೊಗ್ಗ,ಏ.24 : ನಗರದ ವಿನೋಬನಗರ ಬಡಾವಣೆಯದ ಸ್ವಾಮಿ ವಿವೇಕಾನಂದ ಇಂಟರ್‌ನ್ಯಾಷನಲ್ ಸ್ಕೂಲ್ ನ ವಿದ್ಯಾರ್ಥಿನಿ ವಾಣಿ ಆಚಾರ್ಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 617  ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ 9 ನೇ ಸ್ಥಾನವನ್ನು ಜಿಲ್ಲೆಗೆ 8 ನೇ ಸ್ಥಾನವನ್ನು ಪಡೆದು ರಾಜ್ಯ, ಜಿಲ್ಲೆ  ಹಾಗೂ ಶಾಲೆಗೆ ಕೀರ್ತಿತಂದಿದ್ದಾರೆ.
ಬಿ.ಪ್ರದೀಪ್ ಕುಮಾರ್ ಪ್ರ-ಲ್ಲಾ ಇವರ ಪುತ್ರಿಯಾದ ಇವರು ವಿವೇಕಾನಂದ ಶಾಲೆಯ ಛೇರ್ಮನ್ ಅನೂಪ್ ಎನ್ ಪಟೇಲ್ ರವರ ಮಾರ್ಗದರ್ಶನದಲ್ಲಿ ಹಾಗೂ ಶಾಲೆಯ ಶಿಕ್ಷಕರ ಸಹಕಾರದೊಂದಿಗೆ ಈ ಸಾಧನೆ ಮಾಡಿದ್ದು, ಇವರನ್ನು  ಸಂಸ್ಥೆಯ ನಿರ್ದೇಶಕಿ ರಾಗಿಣಿ ಸಿಂಗ್ ಹಾಗೂ ಮುಖ್ಯ ಶಿಕ್ಷಕರು ಹಾಗೂ ಸಿಬ್ಬಂದಿವರ್ಗದವರು ಅಭಿನಂದಿಸಿದ್ದಾರೆ.

Share This Article
";