ಶಿವಮೊಗ್ಗ, ಏ.22 : ಕ್ಷೇತ್ರ ಮರುವಿಂಗಡನೆಯಾದರೆ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗುತ್ತದೆ ಎಂದು ಕಾಂಗ್ರೆಸ್ ಮತ್ತೊಂದು ಸುಳ್ಳನ್ನು ಹೇಳುತ್ತಿದೆ. ಯಾವುದೇ ಕಾರಣಕ್ಕೂ ನಮಗೆ ಅನ್ಯಾಯವಾಗುವುದಿಲ್ಲ. ಬದಲಾಗಿ ಅನುಕೂಲವಾಗಲಿದೆ ಎಂದು ರಾಷ್ಟ್ರಭಕ್ತರ ಬಳಗದ ಸ್ಥಾಪಕ ಕೆ ಎಸ್ ಈಶ್ವರಪ್ಪ ಹೇಳಿದರು.
ಬುಧವಾರ ಪ್ರೆಸ್ ಟ್ರಸ್ಟಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈಗಿರುವ ಕರ್ನಾಟಕದ 28 ಸಂಸದರ ಸಂಖ್ಯೆ 50 % ಹೆಚ್ಚಳವಾಗಿ 42 ಕ್ಕೆ ಏರಿಕೆಯಾಗಲಿದೆ. ಇದರಿಂದ ರಾಜ್ಯದ ಪ್ರಾತಿನಿಧ್ಯ ಮೊದಅಗಿಂತಲೂ ಅಧಿಕವಾಗಲಿದೆ. ಜನಸಂಖ್ಯೆಗೆ ಆಧಾರವಾಗಿ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಜನರ ಪ್ರತಿನಿಧಿತ್ವವನ್ನು ಪಾಲ್ಗೊಳ್ಳುವಂತೆ ಮಾಡುವುದು ಈ ಮಸೂದೆಯ ಆಶಯವಾಗಿದೆ ಎಂದರು.
ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರು ವಿಂಗಡಣೆ ಮಸೂದೆಗಳು ಯಾವುದೇ ರಾಜಕೀಯ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಸರ್ಕಾರ ಮಾಡುತ್ತಿರುವ ಪ್ರಕ್ರಿಯಗಳಲ್ಲ, ಬದಲಾಗಿ ಪ್ರಜಾಪ್ರಭುತ್ವವನ್ನು ಇನ್ನಷ್ಟು ಭಲಗೊಆಸಲು ಅಂಗ ಭೇದವಿಲ್ಲದೆ ಸಮಾನವಾಗಿ ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣದತ್ತ ನಡೆಯುವ ಮಾರ್ಗ. ಕಾಂಗ್ರೇಸ ಪಕ್ಷ ಕ್ಷುಲ್ಲಕ ಕಾರಣ ನೀಡಿ ಈ ಐತಿಹಾಸಿಕ ಬದಲಾವಣೆಗೆ ತಡೆಯೊಡ್ಡುತ್ತಿರುವುದು ಅದರ ಪ್ರಜಾಪ್ರಭುತ್ವ ವಿರೋಧಿ ಧೋರಣೆಯನ್ನು ತೋರಿಸುತ್ತದೆ ಎಂದರು.
ಕ್ಷೇತ್ರ ಮರುವಿಂಗಡಣೆಯ ಮಸೂದೆಯೊಟ್ಟ್ಟಿಗೆ ಮಹಿಳಾ ಮೀಸಲಾತಿಯನ್ನು ತಳುಕು ಹಾಕಿ ಕಾಂಗ್ರೆಸ್ ಮಸೂದೆಯನ್ನು ಸೋಲಿಸಿತು. ಆದರೆ ಲೋಕಸಭೆಯಲ್ಲಿ ಎರಡೂ ಮಸೂದೆಗಳು ಮಂಡನೆಯಾದರೂ ಮತಕ್ಕೆ ಹಾಕಿದ್ದು ಮಹಿಳಾ ಮೀಸಲಾತಿ ಮಸೂದೆಯನ್ನು ಮಾತ್ರ. ಮಹಿಳೆಯರ ಸಬಲೀಕರಣಕ್ಕಾಗಿ ಈ ಮಸೂದೆಯನ್ನು ಬೆಂಬಲಿಸುವಂತೆ ಲೋಕಸಭೆಯಲ್ಲಿ ಸ್ವತಃ ಪ್ರಧಾನಿಯವರೇ ಕೋರಿಕೊಂಡರು. ಕಾಂಗ್ರೇಸ್ ಬೆಂಬಲಿಸಲಿಲ್ಲ, ಮೂರು ದಿನ ನಡೆದ ಚರ್ಚೆಯಲ್ಲಿ ಮಸೂದೆಯ ಪರವಾಗಿರುವುದಾಗಿ ಹೇಳಿದ್ದ ಕಾಂಗ್ರೇಸ್ ನಂತರ ಕಾಯ್ದೆಯನ್ನು ಸೋಲಿಸಿದ್ದನ್ನು ದೇಶದ ಮಹಿಳೆಯರು ಎಂದಿಗೂ ಕ್ಷಮಿಸಲಾರರು ಎಂದರು.
ಮಹಿಳಾ ಮೀಸಲಾತಿ ಮಸೂದೆಯ ಸೋಲು ಭಾರತೀಯ ಮಹಿಳೆಯರಿಗೆ ಕಾಂಗ್ರೆಸ್ ಮಾಡಿದ ಅವಮಾನ, ಮುಂದಿನ ದಿನಗಳಲ್ಲಾದರೂ ಕಾಂಗ್ರೆಸ್ ತನ್ನ ತಪ್ಪನ್ನು ತಿದ್ದಿಕೊಂಡು ಮಸೂದೆಯನ್ನು ಬೆಂಬಲಿಸಬೇಕು. ಪ್ರಧಾನಿಯವರು ಮುಂಬರುವ ಅಧಿವೇಶನದಲ್ಲಿ ಈ ಮಸೂದೆಯನ್ನು ಪುನಃ ಮಂಡಿಸುವುದರ ಮೂಲಕ ದೇಶದ ಮಹಿಳಾ ಶಕ್ತಿಗೆ ರಾಜಕೀಯ ಪ್ರಾತಿನಿದ್ಯವನ್ನು ಕಲ್ಪಿಸುವುದರ ಮೂಲಕ ದೇಶದ ಅಭಿವೃದ್ಧಿಯಲ್ಲ ಮಹಿಳೆಯರ ಒಳಗೊಳ್ಳುವಿಕೆಗೆ ಅವಕಾಶ ಮಾಡಿಕೊಡಬೇಕೆಂಬುದು ಕೋರಿದರು.
