ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

Kranti Deepa

ಶಿವಮೊಗ್ಗ:ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ವಿವಿಧ ಪ್ರೌಢಶಾಲೆಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದಿದ್ದು, 5 ಪ್ರೌಢಶಾಲೆಗಳಿಗೆ ಶೇ.100% ಫಲಿತಾಂಶ ಲಭಿಸಿದೆ‌.

ಕಸ್ತೂರಬಾ ಬಾಲಿಕ ಪ್ರೌಢಶಾಲೆ, ಕೋಣಂದೂರಿನ ರಾಷ್ಟ್ರೀಯ ಪ್ರೌಢಶಾಲೆ, ಕುಂಸಿ ರಾಷ್ಟ್ರೀಯ ಪ್ರೌಢಶಾಲೆ, ಚೀಲೂರು ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಗಳು ತಲಾ ಶೇ.100% ಫಲಿತಾಂಶ ದಾಖಲಿಸಿದೆ. ಜೆ.ಪಿ.ಎನ್ ಪ್ರೌಢಶಾಲೆ ಶೇ. 97.25, ಬಿ.ಆರ್.ಪಿ ಪ್ರೌಢಶಾಲೆ ಶೇ. 97.18, ಹುಂಚ ಪದ್ಮಾಂಬ ಪ್ರೌಢಶಾಲೆ ಶೇ. 97, ರಾಷ್ಟ್ರೀಯ ಪ್ರೌಢಶಾಲೆ ಶೇ. 94.28, ಗುಂಡಪ್ಪಶೆಡ್ ರಾಷ್ಟ್ರೀಯ ಆಂಗ್ಲ ಮಾಧ್ಯಮ ಶಾಲೆ ಶೇ. 92.31, ಹರಿಗೆ ಶರಾವತಿ ಪ್ರೌಢಶಾಲೆ ಶೇ.80, ಬೆಳಗುತ್ತಿ ತೀರ್ಥಲಿಂಗೇಶ್ವರ ಪ್ರೌಢಶಾಲೆ ಶೇ.80 ಫಲಿತಾಂಶ ಪಡೆದಿದ್ದಾರೆ.

ವಿಶೇಷವಾಗಿ ಚೀಲೂರು ರಾಷ್ಟ್ರೀಯ ಆಂಗ್ಲ ಮಾಧ್ಯಮ ಶಾಲೆಯು ಶೇ.90.61 ರಷ್ಟು ಹಾಗೂ‌ ಶೇ.100% ಪಡೆದ ಶಾಲೆಗಳು ಶೇ. 80% ಗಿಂತ ಹೆಚ್ಚು ಗುಣಾತ್ಮಕ ಫಲಿತಾಂಶ ಪಡೆಯುವಲ್ಲಿ ಸಫಲರಾಗಿದ್ದಾರೆ. ಒಟ್ಟಾರೆ 751 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 734 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ. ಇದರಲ್ಲಿ 94 ಡಿಸ್ಟಿಂಗಷನ್, 398
ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಕಸ್ತೂರಬಾ ಬಾಲಿಕಾ ಪ್ರೌಢಶಾಲೆಯ ವಿದ್ಯಾರ್ಥಿನಿ ನಂದಿತಾ.ಆರ್.ಹೆಬ್ಬಾರ್‌ (ಶೇ.97.28), ಜೆ.ಪಿ.ಎನ್‌ ಪ್ರೌಢಶಾಲೆಯ ವಿದ್ಯಾರ್ಥಿನಿ ಶ್ರಾವ್ಯ (ಶೇ.97.12),ಕೋಣಂದೂರು ರಾಷ್ಟ್ರೀಯ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ಧನ್ಯ.ಡಿ.ಪ್ರಭು (ಶೇ.97.12), ರೀಶ.ಜಿ.ಪಿ.ಶೆಟ್ಟಿ (ಶೇ.96.16), ಚೀಲೂರಿನ ರಾಷ್ಟ್ರೀಯ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿನಿ ನೇಹಾ.ಬಿ
(ಶೇ.96.48) ಪಡೆದಿದ್ದಾರೆ.

ವಿದ್ಯಾರ್ಥಿಗಳಿಗೆ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರಿಗೆ ರಾಷ್ಟ್ರೀಯ ಶಿಕ್ಷಣ ಸಮಿತಿ ಆಡಳಿತ ಮಂಡಳಿ  ಸದಸ್ಯರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.

Share This Article
";