ಜೀವನದಲ್ಲಿ ಚಿನ್ನ, ಬೆಳ್ಳಿ ಪಾತ್ರ ಮಹತ್ವದ್ದು: ಆಭರಣ ಶೋರೂಮ್ ಉದ್ಘಾಟಿಸಿ ಕಿರುತೆರೆ ನಟಿ ಅಂಕಿತಾ ಅಮರ್ ಅಭಿಮತ

module:1facing:0; ?hw-remosaic: 0; ?touch: (-1.0, -1.0); ?modeInfo: ; ?sceneMode: Auto; ?cct_value: 0; ?AI_Scene: (-1, -1); ?aec_lux: 0.0; ?hist255: 0.0; ?hist252~255: 0.0; ?hist0~15: 0.0; ?module:1facing:0; hw-remosaic: 0; touch: (-1.0, -1.0); modeInfo: ; sceneMode: Auto; cct_value: 0; AI_Scene: (-1, -1); aec_lux: 0.0; hist255: 0.0; hist252~255: 0.0; hist0~15: 0.0;
Kranti Deepa

ಶಿವಮೊಗ್ಗ, ಏ. 29 : ದೈನಂದಿನ ಜೀವನದಲ್ಲಿ ಚಿನ್ನ ಬೆಳ್ಳಿ ಮತ್ತು ಮಹತ್ವದ ಪಾತ್ರವನ್ನು ವಹಿಸುತ್ತವೆ. ಚಿನ್ನಾಭರಣ ನಮ್ಮ ದೇಹವನ್ನು ಬೆಚ್ಚಗಿರಿಸುತ್ತದೆ. ಬೆಳ್ಳಿ ನಮ್ಮ ಭಾವನಾತ್ಮಕ ಶಕ್ತಿಯನ್ನು ನಿಯಂತ್ರಿಸುತ್ತದೆ. ಮನುಷ್ಯನ ಜೀವನದಲ್ಲಿ ಇವರೆಡರ ಪಾತ್ರ ಮಹತ್ವದ್ದು ಎಂದು ಕಿರುತೆರೆ ನಟಿ ಅಂಕಿತಾ ಅಮರ್ ಅಭಿಪ್ರಾಯಪಟ್ಟಿದ್ದಾರೆ.

ಅವರು ಬುಧವಾರ ನಗರದ ಕುವೆಂಪು ರಸ್ತೆಯ ಜೈಲ್ ವೃತ್ತದ ಬಳಿಯ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡ ಆಭರಣ ಜ್ಯುವೆಲರಿ ಶೋರಂ ಉದ್ಘಾಟಿಸಿ ಮಾತನಾಡಿದರು.
ಚಿನ್ನ ಒಳ್ಳೆಯ ಲೋಹ. ಅದು ಎಂದಿಗೂ ತುಕ್ಕು ಹಿಡಿಯುವುದಿಲ್ಲ. ಅದು ಮೈಮೇಲೆ ಇದ್ದಷ್ಟು ಹೆಚ್ಚು ಬಾಳಿಕೆ ಬರುತ್ತದೆ. ಮಾಂಗಲ್ಯ, ಉಂಗುರ, ಸರ, ಬ್ಲೇಸೆಟ್, ಬಳೆ ಮೊದಲಾದವು ನಮ್ಮ ಅಂದವನ್ನು ಹೆಚ್ಚಿಸುವುದರ ಜೊತೆಗೆ ದೈಹಿಕ ಆರೋಗ್ಯಕ್ಕ್ಕೆ ಉತ್ತಮ. ಬೆಳ್ಳಿಯನ್ನೂ ಕೂಡ ಕಾಲುಂಗುರ, ಉಂಗುರದ ಮೂಲಕ ಧರಿಸಲಾಗುತ್ತದೆ ಎಂದರು.

ಆಭರಣ ಜ್ಯುವೆಲರಿಯ ಮಾದರಿಯೇ ವಿಶಿಷವಾದುದು. ಒಮ್ಮೆ ಇಲ್ಲಿ ಖರೀದಿಸಿದರೆ ಮತ್ತೆ ಇಲ್ಲಿಗೇ ಬರಬೇಕೆನಿಸುತ್ತದೆ. ಎಷ್ಟೋ ವರ್ಷದ ಹಿಂದೆ ಖರೀದಿಸಿದ ಆಭರಣಗಳು ಇಂದಿಗೂ ತಮ್ಮದೇ ಆದ ಹೊಳಪನ್ನು ಉಳಿಸಿಕೊಂಡು ಅಂಗಡಿಯ ಹೆಸರನ್ನು ನೆನೆಪಿಸುತ್ತವೆ ಎಂದ ಅವರು, ಅಂಗಡಿಯ ಸಿಬ್ಬಂದಿಗಳು ಸಹ ಗ್ರಾಹಕರು ತಮ್ಮ ಅಂಗಡಿಯ ಗ್ರಾಹಕರಾಗಿ ಸದಾ ಇರುವಂತೆ ನೋಡಿಕೊಳ್ಳಬೇಕು ಎಂದು ಕರೆಕೊಟ್ಟರು.

ಇನ್ನೊಬ್ಬ ನಟಿ ಜೇಷ್ಠಾ ಭಂಡಾರಿ ಮಾತನಾಡಿ, ಆಭರಣದ ಚಿನ್ನಾಭರಣಗಳ ಪರಿಶುದ್ಧತೆ ಮತ್ತು ಹೊಸತನವನ್ನು ಸ್ಮರಿಸಿದರಲ್ಲದೆ, ವಿಶ್ವಾಸ, ಕುಶಲತೆ ಚಿರ ಸೌಂದರ್ಯಕ್ಕೆ ಹೆಸರುವಾಸಿಯಾದ ಒರಿಜಿನಲ್ ಆಭರಣ ಇಲ್ಲಿದೆ ಎಂದರು.

ಭಾಸ್ಕರ್ ಜಿ ಕಾಮತ್ ದಂಪತಿ , ರೋಹಿಣಿ ಜಗದೀಶ್ ಪೈ ಹಾಗೂ ಮುದುಲ ರಂಜನ್ ಪೈ ಬೆಳ್ಳಿಯ ಆಭರಣಗಳ ಅನಾವರಣ ಮಾಡಿದರು. ಟಿ.ಆರ್. ಅಶ್ವತ್ಥನಾರಾಯಣ್, ಟಿ. ಆರ್ ವೆಂಕಟೇಶ್ ದಂಪತಿ ವಜ್ರದ ಆಭರಣಗಳ ವಿಭಾಗದ ಶುಭಾರಂಭ ಮಾಡಿದರು.

ಪ್ರಾಸ್ತಾವಿಕ ಮಾತನಾಡಿದ ಸಂಸ್ಥೆಯ ಕಾರ್ಯನಿವಾಹಕ ನಿರ್ದೇಶಕ ಸುಭಾಷ್ ಕಾಮತ್, ಸಕಲ ಸವಲತ್ತುಗಳ ಐಷಾರಾಮಿ ಅನುಭವವನ್ನು ನೀಡಲು ಈ ಹೊಸ ವಿಶಾಲ ಶೋರೂಮ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದು ತನ್ನ ಬಂಗಾರ, ವಜ್ರ ಮತ್ತು ಮದುವೆಯ ಆಭರಣಗಳ ಆಯ್ದ ಪಾರಂಪರಿಕ ಹಾಗೂ ಅತ್ಯಾಧುನಿಕ ಸಂಗ್ರಹಗಳ ಪ್ರದರ್ಶನದಿಂದ ಸಂದರ್ಶಕರನ್ನು ಮಂತ್ರಮುಗ್ಧಗೊಳಿಸಲಿದೆ. ಇದು ಆಭರಣದ ರಿಟೇಲ್ ವ್ಯಾಪಾರದ ಭವಿಷ್ಯಕ್ಕಾಗಿ ’ದ ಒರಿಜಿನಲ್ ಆಭರಣ’ದ ದೂರದೃಷ್ಟಿಯನ್ನು ಪ್ರತಿಬಿಂಬಿಸಲಿದೆ ಎಂದರು.
ಆಭರಣ ಸಂಸ್ಥೆಯ ಪಾಲುದಾರರಾದ ಮಧುಕರ ಎಸ್. ಕಾಮತ್, ಸುಭಾಸ್ ಎಂ. ಕಾಮತ್, ಮಹೇಶ್ ಎಂ. ಕಾಮತ್, ಸಂಧ್ಯಾ ಎಸ್. ಕಾಮತ್, ವೀಣಾ ಎಂ. ಕಾಮತ್, ಸಾತ್ವಿಕ್ ಕಾಮತ್, ಆಕರ್ಷ್ ಕಾಮತ್, ಶ್ಲೋಕಾ ಕಾಮತ್ ಮತ್ತು ಅದಿತ್ರಿ ಕಾಮತ್ ಹಾಜರಿದ್ದರು.ಆರ್.ಜೆ. ನಿಖಿತಾ ಹಾಗೂ ಗೌರಿ ಕಾರ್ನಾಡ್ ನಿರೂಪಿಸಿದರು.

ಇ೦ದು ನಮಗೆ ದೊರೆತ ಪ್ರೋತ್ಸಾಹ, ಬೆಂಬಲ ಕ೦ಡು ನಾವೆಲ್ಲ ಭಾವಪರವಶರಾಗಿದ್ದೇವೆ. ಈ ಸ್ಥಳಾಂತರವು ಕೇವಲ ಹೊಸ ವಿಳಾಸಕ್ಕೆ ಸೀಮಿತವಾಗಿಲ್ಲ. ಇದು ಶಿವಮೊಗ್ಗದ ನಮ್ಮ ಗ್ರಾಹಕರಿಗೆ ನಮ್ಮ ಮೇಲಿರುವ ಅಪಾರ ವಿಶ್ವಾಸವನ್ನು ಮತ್ತು ನಮ್ಮ ಅವಿನಾಭಾವ ನಡುವಿನ ಸಂಬಂಧವನ್ನು ಪ್ರತಿಫಲಿಸುತ್ತದೆ. ನಾವು ಈ ಪರಸ್ಪರ ಬಾಂಧವ್ಯವನ್ನು ಇನ್ನಷ್ಟು ಅಂದಗಾಣಿಸುವತ್ತ ಕಂಕಣಬದ್ದರಾಗಿದ್ದೇವೆ ಎಂದರು.
– ಸುಭಾಷ್ ಕಾಮತ್, ಅಭರಣ ಸಿಇಓ 

Share This Article
";