ಪ್ರೇರಣ ಕೆ ರಾವ್‌ಗೆ ರಾಷ್ಟ್ರೀಯ ರಕ್ಷಾ ವಿವಿಯಲ್ಲಿ ಚಿನ್ನದ ಪದಕ

Kranti Deepa

ಶಿವಮೊಗ್ಗ,ಏ.16  : ಅಹಮದಾಬಾದ್ ನಲ್ಲಿ ನಡೆದ ರಾಷ್ಟ್ರೀಯ ರಕ್ಷಾ ವಿವಿಯ ೫ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಪ್ರೇರಣಾ ಕೆ ರಾವ್ ಎಂಎಸ್ಸಿ ಸೈಬರ್ ಸೆಕ್ಯುರಿಟಿ ಅಂಡ್ ಡಿಜಿಟಲ್ ಫೋರೆನ್ಸಿಕ್ನಲ್ಲಿ( CS & FD ) ಗುಜರಾತ್ ರಾಜ್ಯಪಾಲರಾದ ಆಚಾರ್ಯ ದೇವವ್ರತ್ ರವರಿಂದ ಚಿನ್ನದ ಪದಕ ಸ್ವೀಕರಿಸಿದರು.

ಈ ಕಾರ್ಯಕ್ರಮದಲ್ಲಿ ಭಾರತದ ರಾಷ್ಟ್ರಪತಿಗಳಾದ ಸನ್ಮಾನ್ಯ ದ್ರೌಪದಿ ಮುರ್ಮುರವರು ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಮಾನ್ಯ ಅಜಿತ್ ದೊವೆಲ್ ರವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.

ಕಾರ್ಯಕ್ರಮದಲ್ಲಿ ಗುಜರಾತ್ ಮುಖ್ಯಮಂತ್ರಿಗಳಾದ ಭೂಪೇಂದ್ರ ಬಾಯ್ ಪಟೇಲ್, ಗೃಹ ಸಚಿವರಾದ ನಿತ್ಯಾನಂದ ರಾಯ್, ರಾಷ್ಟ್ರೀಯ ರಕ್ಷಾ ವಿವಿ ಉಪಕುಲಪತಿ ಬಿಮಲ್ ಎನ್ ಪಟೇಲ್ ಉಪಸ್ಥಿತರಿದ್ದರು.

ಇವರು ದಿವಂಗತ ಕಾಶಿ ವಿಶ್ವನಾಥ್ ಮತ್ತು ಪದ್ಮನಿ ಯವರ ಪುತ್ರಿಯಗಿದ್ದಾರೆ.ಇವರ ಈ ಸಾಧನೆಗೆ ಕ್ರಾಂತಿದೀಪ ಬಳಗ ಅಭಿನಂದಿಸುತ್ತದೆ.

 

Share This Article
";