ಶಿವಮೊಗ್ಗ,ಏ. 30 : ನಗರದ ಪ್ರತಿಷ್ಠಿತ ನಂಜಪ್ಪ ಆಸ್ಪತ್ರೆ ಹಾಗೂ ನಂಜಪ್ಪ ಲೈಫ್ ಕೇರ್ ವತಿಯಿಂದ ಏ. 30 ರಂದು ವಿಶೇಷ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರದಲ್ಲಿ ಸಾರ್ವಜನಿಕರಿಗೆ ತಜ್ಞ ವೈದ್ಯರಿಂದ ಉಚಿತ ಸಮಾಲೋಚನೆ ನೀಡಲಾಗುವುದು.
ನಂಜಪ್ಪ ಆಸ್ಪತ್ರೆಯಲ್ಲಿ ಜನರಲ್ ಫಿಸಿಷಿಯನ್, ಮೂಳೆ ಶಸ್ತ್ರಚಿಕಿತ್ಸಕರು ಮತ್ತು ಮಕ್ಕಳ ತಜ್ಞರಿಂದ ಉಚಿತ ಸಮಾಲೋಚನೆ ಹಾಗು ನಂಜಪ್ಪ ಲೈಫ್ ಕೇರ್ ನಲ್ಲಿ ಜನರಲ್ ಫಿಸಿಷಿಯನ್, ಕಿಡ್ನಿ ತಜ್ಞರು, ಶ್ವಾಸಕೋಶ ತಜ್ಞರು, ಸ್ತ್ರೀರೋಗ ತಜ್ಞರು ಹಾಗೂ ಕ್ಯಾನ್ಸರ್ ತಜ್ಞರಿಂದ(ಮೆಡಿಕಲ್ ಮತ್ತು ಸರ್ಜಿಕಲ್) ಉಚಿತ ಸಮಾಲೋಚನೆ ನೀಡಲಾಗುತ್ತದೆ.ಅಲ್ಲದೆ, ವೈದ್ಯರು ಸೂಚಿಸಿದ *ರಕ್ತ ಪರೀಕ್ಷೆ ಹಾಗೂ ರೇಡಿಯಾಲಜಿ ಸೇವೆಗಳ ಮೇಲೆ ಶೇ. 40 ರಷ್ಟು ರಿಯಾಯಿತಿ* ಮತ್ತು *ಚರ್ಮರೋಗ ಕಾರ್ಯವಿಧಾನಗಳ ಮೇಲೆ ಶೇ. 20* ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.
ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗ ಪಡೆದುಕೊಳ್ಳಬೇಕಾಗಿ ಆಸ್ಪತ್ರೆಯ ಆಡಳಿತ ಮಂಡಳಿಯಿಂದ ಪ್ರಕಟಣೆ ನೀಡಲಾಗಿದೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ನಂಜಪ್ಪ ಆಸ್ಪತ್ರೆ – 08182-268000 ಅಥವಾ ನಂಜಪ್ಪ ಲೈಫ್ ಕೇರ್ – 08182-251166
