ಶಿವಮೊಗ್ಗ,ಏ.25 : ಗೋವರ್ಧನ ಟ್ರಸ್ಟ್ ಶಿವಮೊಗ್ಗ ವತಿಯಿಂದ ಗೋವುಗಳ ಸೇವೆಗೆ ಆಂಬ್ಯುಲೆನ್ಸ್ ಸಮರ್ಪಣೆ, ಗೋಶಾಲೆ, ಸಾವಯವ ಕೃಷಿಕರ ಟ್ರಸ್ಟ್ ಉದ್ಘಾಟನೆ, ಮತ್ತು ಗೋಸೇವೆಗೈದ 20 ಹಿತೈಷಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮವನ್ನು ಎಪ್ರಿಲ್ 27 ರ ಬೆಳಿಗ್ಗೆ 10 ಗಂಟೆಗೆ ಶುಭ ಮಂಗಳ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
ಪ್ರೆಸ್ ಟ್ರಸ್ಟಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಗೋವರ್ಧನ ಟ್ರಸ್ಟ್ ಅಧ್ಯಕ್ಷ ಕೆ ಇ ಕಾಂತೇಶ್, ಧರ್ಮಸ್ಥಳದ ಧರ್ಮಾಕಾರಿ ವೀರೇಂದ್ರ ಹೆಗ್ಗಡೆ ಅವರ ಸಹೋದರ ಸುರೇಂದ್ರಕುಮಾರ್ ಕಾರ್ಯ ಕ್ರಮ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಕೆ ಎಸ್ ಈಶ್ವರಪ್ಪ ವಹಿಸುವರು. ಅತಿಥಿಯಾಗಿ ಗೋವರ್ಧನಾ ಟ್ರಸ್ಟ್ ಅಧ್ಯಕ್ಷ ಕೆ ಕಾಂತೇಶ್ ಆಗಮಿಸುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಜ್ಞಾನೇಶ್ವರಿ ಮತ್ತು ಸುರಭಿ ಗೋಶಾಲೆಗಳಿಗೆ ಮೂಲಸೌಕರ್ಯಗಳನ್ನು ಒದಗಿಸಲಾಗು ವುದು, 20 ಕ್ಕೂ ಹೆಚ್ಚು ಗೋಸಂರಕ್ಷಕರಿಗೆ ಉದ್ಘಾಟಕರಿಂದ ಗೌರವಾರ್ಪಣೆ ಮಾಡಲಾಗುವುದು. ಜೊತೆಗೆ ಉಚಿತವಾಗಿ ತಮ್ಮ ಜಮೀನಿನಲ್ಲಿ ಹುಲ್ಲು ಬೆಳೆಯಲು ಅವಕಾಶ ಮಾಡಿಕೊಟ್ಟ ಗೋಂಚಟ್ನಳ್ಳಿಯ ರಮೇಶ್ ಮತ್ತು ಶಿವಮೊಗ್ಗದ ಕಾರ್ತಿಕ್ ರಾಜಶೇಖರ್ ಅವರಿಗೆ ಗೌರವಿಸಲಾಗುವುದು ಎಂದು ವಿವರಿಸಿದರು.
ಉದ್ಘಾಟನೆಯಾಗಲಿರುವ ಅಂಬ್ಯುಲೆನ್ಸ್ ಮೂಲಕ ಅಪಘತಕ್ಕೀಡಾ ಗೋವುಗಳನ್ನು ಅಥವಾ ರೋಗಪೀಡಿತ ಗೋವುಗಳನ್ನು ಸಾಗಿಲಸು ಬಳಸಲಾಗುವುದು.ಇದಕ್ಕೆ ಸುಮಾರು 25 ಲಕ್ಷ ರೂ, ಖರ್ಚಾಗಿದೆ. ಗೋವುಗಳನ್ನು ಹತ್ಯೆ ಮಾಡುತ್ತಿರುವುದನ್ನು ನಿಲ್ಲಿಸುವ ಉದ್ದೇಶದಿಂದ ಮತ್ತು ಅಹಿಂಸಾ ಪರಮೋಧರ್ಮ ಎಂಬ ನುಡಿಯಂತೆ ಸಮಾನ ಮನಸ್ಕರು ಸೇರಿ ಸ್ಥಾಪಿಸಿರುವುದು ಈ ಗೋರ್ವಧನಾ ಟ್ರಸ್ಟನ್ನು ಶೃಂಗೇರಿಯ ಶಾರದಾ ಪೀಠದ ವಿಧುಶೇಖರ ಸ್ವಾಮೀಜಿ ಉದ್ಘಾಟಿಸಿದ್ದಾರೆ. ಇದಕ್ಕೆ ಪೂರಕವಾಗಿ 3 ಲಕ್ಷ ರೂ. ಗಳನ್ನು ನೀಡಿದ್ದಾರೆ . ರೇಣುಕಾ ವೀರಸೋಮೇಶ್ವರ ಸ್ವಾಮೀಜಿ ಸಹ 50,000 ಗಳನ್ನು, ಹುಂಚ ಚಾರುಕೀರ್ತಿ ಸ್ವಾಮೀಜಿಯವರು 2 ಲಕ್ಷ ರೂಗಳನ್ನು ಸಹಾಯ ಮಾಡಿದ್ದಾರೆ. ಅವರ ಅಮೃತಹಸ್ತದಿಂದ ಹುಲ್ಲು ಬಿತ್ತನೆ ಕಾರ್ಯಕ್ರಮವನ್ನು ಅಂದು ಗೋಂಚಟ್ನಹಳ್ಳಿಯಲ್ಲಿ ಉದ್ಘಾಟಿಸಲಾಗುವುದು ಎಂದು ಹೇಳಿದರು.
ಮುಖಂಡರಾದ ಉಮೇಶ್ ಆರಾಧ್ಯ,ಎನ್ ಕೆ ಶೇಷಾಚಲ, ಗುರುರಾಜ್ ಶೇಟ್, ಉಷಾ ಅರುಣ್, ಶುಭಾ ರಾಘವೇಂದ್ರ, ನಾಗೇಶ, ಹರೀಶ್ ಕಾರ್ಣಿಕ್ ಮೊದಲಾದವರಿದ್ದರು.
