ಶಿವಮೊಗ್ಗ,ನ.06 : ಬೆಳೆ ವಿಮೆ ಯೋಜನೆಯಡಿಯಲ್ಲಿ ಜಿಲ್ಲೆಯ ರೈತರಿಗೆ ಸುಮಾರು 435 ಕೋಟಿ ರೂ. ಬಿಡುಗಡೆ ಯಾಗಲಿದ್ದು, ೫೦,೩೮೦ ರೈತರಿಗೆ ಎಕರೆಗೆ 25 ಸಾವಿರ ರೂ.ಗಳಾದರೂ ವಿಮೆ ಪರಿಹಾರ ಸಿಗ ಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಮಂಗಳವಾರ ಸುದ್ಧಿಗೋಷ್ಠಿಯಲ್ಲಿ ಮಾತ ನಾಡಿದ ಅವರು, 2023-24 ರ ಬೆಳೆ ವಿಮೆಗಾಗಿ ಜಿಲ್ಲೆಯಲ್ಲಿ ಸುಮಾರು ೫೦೩೮೩ ರೈತರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಅಗ್ರಿಕಲ್ಚರ್ ಇನ್ಶುರೆನ್ಸ್ ಕಂಪನಿಗೆ ಇದರ ಜವಾಬ್ದಾರಿ ನೀಡ ಲಾಗಿತತು. ಕಳೆದ ವರ್ಷ ಬರಗಾಲ ಬಂದಿತ್ತು. ಸುಮಾರು 87 ಸಾವಿರ ಎಕರೆ ಜಮೀನಿನಲ್ಲಿ ಬೆಳೆಯೇ ಇರಲಿಲ್ಲ. 445 ಕೋಟಿ ರೂ. ಪರಿಹಾರ ನೀಡಬೇಕಿತ್ತು. ಇದರಲ್ಲಿ ರೈತರು ಸುಮಾರು 22.50 ಕೋಟಿ ರೂ. ವಿಮೆ ಕಟ್ಟಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಅಡಿಕೆ ಬೆಳೆಯೇ ಹೆಚ್ಚು ನಷ್ಟ ಉಂಟಾಗಿದೆ. ಇದರ ಜೊತೆಗೆ ಶುಂಠಿ, ಮಾವು ಮೆಣಸು ಕೂಡ ಸೇರಿದೆ. ಆದರೆ, ಸುಮಾರು ೪೮೬೧೯ ಅಡಿಕೆ ಬೆಳೆಗಾರರು ವಿಮೆಗಾಗಿ ಅರ್ಜಿ ಹಾಕಿದ್ದಾರೆ. ಸುಮಾರು 84 ಸಾವಿರ ಎಕರೆ ಪ್ರದೇಶ ದಲ್ಲಿ ಅಡಕೆ ಬೆಳೆ ನಷ್ಟವಾಗಿದೆ. ೪೪೫ ಕೋಟಿ ರೂ.ಗಳಲ್ಲಿ 435 ಕೋಟಿ ರೂ. ಅಡಿಕೆ ಬೆಳೆಗೆ ಪರಿಹಾರ ಸಿಗಲಿದೆ. ಇನ್ನು 8-10 ದಿನಗಳಲ್ಲಿ ರೈತರ ಖಾತೆಗೆ ಹಣ ಜಮಾ ಆಗುತ್ತದೆ ಎಂದು ಮಾಹಿತಿ ನೀಡಿದರು.
ಅಬಕಾರಿ ಇಲಾಖೆಯ ಅಕಾರಿಗಳ ವರ್ಗಾ ವಣೆಯಲ್ಲಿ ಮುಖ್ಯಮಂತ್ರಿ ಮತ್ತು ಅಬಕಾರಿ ಸಚಿವರ ನಡುವೆ ಪೈಪೋಟಿ ನಡೆದಿದ್ದು, ನೂರಾರುಕೋಟಿಯ ಅವ್ಯವಹಾರ ಬಯಲಿಗೆ ಬಂದಿದೆ ಎಂದು ಹೇಳಿದರು.
ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರದ ಬಗ್ಗೆ ಈಗಾಗಲೆ ಮಧ್ಯ ಮಾರಾಟಗಾರರ ಸಂಘವೇ ರಾಜ್ಯಪಾಲರಿಗೆ, ಸರ್ಕಾರದ ಮುಖ್ಯಕಾರ್ಯ ದರ್ಶಿಗಳಿಗೆ ಲಿಖಿತ ದೂರು ನೀಡಿದೆ.
ಅಬಕಾರಿ ಇಲಾಖೆ ಅಕಾರಿಗಳ ವರ್ಗಾವಣೆಯ ವಿಚಾರ ದಲ್ಲಿ ಅಬಕಾರಿ ಸಚಿವ ಅರ್.ಬಿ ತಿಮ್ಮಾಪುರ್ ಅವರ ಮಕ್ಕಳು ಹಸ್ತಕ್ಷೇಪ ಮಾಡುತ್ತಿದ್ದು, ಮುಖ್ಯ ಮಂತ್ರಿಗಳು ಈ ಪಟ್ಟಿಯನ್ನು ತಡೆ ಹಿಡಿದಿದ್ದಾರೆ. ಇದರಿಂದ ಕೋಟ್ಯಾಂತರ ರೂಪಾಯಿಗಳ ಹಣದ ಅವ್ಯವಹಾರ ಬಯಲಿಗೆ ಬಂದಿದೆ ಎಂಬ ಮಾಹಿತಿ ತಿಳಿದು ಬಂದಿದೆ ಎಂದರು.
ಕಾಂಗ್ರೆಸ್ ಸರ್ಕಾರ ಅಕಾರಕ್ಕೆ ಬಂದ ಒಂದು ವರ್ಷದಲ್ಲಿ ಸರ್ಕಾರಿ ಅಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದ್ದು, ಸರ್ಕಾರ ಭ್ರಷ್ಟಾಚಾರ ದಲ್ಲಿ ತೊಡಗಿರುವುದಕ್ಕೆ ಸಾಕ್ಷಿಯಾಗಿದೆ ಬಿ.ವೈ ರಾಘವೇಂದ್ರ ಆರೋಪಿಸಿದರು.
ಶಿವಮೊಗ್ಗದಲ್ಲಿ ಸರ್ಕಾರಿ ಭೂಮಿಯನ್ನು ಇಂಡೀಕರಣ ಮಾಡಿ ಜನರಿಗೆ ಭೂಮಿ ಕೊಡಲು ಆಗುತ್ತಿಲ್ಲ. ರೈತರು, ಮಠ, ಮಂದಿರಗಳ ಆಸ್ತಿಯನ್ನು ವಕ್ ಗೆ ಸೇರಿಸುವ ಆಸಕ್ತಿ ಯಾಕೆ?, ಒಂದು ಸಮುದಾಯವನ್ನು ಓಲೈಸಲು ರಾಜ್ಯ ಸರ್ಕಾರ ಲ್ಯಾಂಡ್ ಜಿಹಾದ್ ನಡೆಸುತ್ತಿದೆ. ಬೇಕಾಬಿಟ್ಡಿ ಆಸ್ತಿಗಳ ಸ್ವಾನ ಪಡಿಸಿಕೊಳ್ಳು ಯತ್ನಿಸುತ್ತಿರುವ ರಾಜ್ಯ ಸರ್ಕಾರ ಹಿಂದೂ ಗಳ ಭೂಮಿಯನ್ನಷ್ಟೆ ಅಲ್ಲದೆ ಮುಸ್ಲಿಂ ಸಮುದಾಯದವರ ಭೂಮಿಯನ್ನು ವಶಪಡಿಸಿಕೊಳ್ಳುತ್ತಿದ್ದು, ಧರ್ಮ -ಧರ್ಮಗಳ ನಡುವಿನ ವಿವಾದವನ್ನಾಗಿ ಸೃಷ್ಟಿಸಲು ಯತ್ನಿಸುತ್ತಿದೆ. ರಾಜ್ಯದಲ್ಲಿ ವಕ್ ನ್ಯಾಯಾಲಯದಲ್ಲಿ ವಕ್ ಆಸ್ತಿಯ ಅನಕೃತ ಒತ್ತುವರಿಯ ೩೭೨೦ ಪ್ರಕರಣಗಳ ೩೧೯ ಎಕರೆ ಭೂಮಿಯ ಪ್ರಕರಣಗಳು ದಾಖಲಾಗಿವೆ. ೧೪೦೦ ಕ್ಕಿಂತ ಹೆಚ್ಚಿನ ಪ್ರಕರಣಗಳು ತೀರ್ಪಿಗೆ ಕಾದಿವೆ. ವ್ಯವಸ್ಥಿತವಾಗಿ ರಾಜ್ಯದಲ್ಲಿ ತರಾತುರಿಯಲ್ಲಿ ಉದ್ದೇಶಪೂರ್ವಕವಾಗಿ ವಕ್ ಆಸ್ತಿ ಖಾತೆ ಏರಿಸಲು ಅಕೃತವಾಗಿ ಸರ್ಕಾರ ಕೆಲಸ ಮಾಡುತ್ತಿದೆ ಎಂದ ಸಂಸದ ಬಿ.ವೈ ರಾಘವೇಂದ್ರ ಅವರು ಬಿಜೆಪಿ ಇದರ ವಿರುದ್ದ ಹೋರಾಟ ಮುಂದುವರೆಸಲಿದೆ. ತಕ್ಷಣವೇ ರೈತರ, ಮಠಮಂದಿರಗಳ ಭೂಮಿಯನ್ನು ವಕ್ ಖಾತೆಗೆ ಸೇರಿಸುವ ಕೆಲಸವನ್ನು ಕೈ ಬಿಡಬೇಕು.
– ಬಿ.ವೈ. ರಾಘವೇಂದ್ರ, ಸಂಸದ
ಸುದ್ಧಿಗೋಷ್ಠಿಯಲ್ಲಿ ಶಾಸಕರಾದ ಎಸ್‌ಎನ್. ಚನ್ನಬಸಪ್ಪ, ಡಾ|| ಧನಂಜಯ ಸರ್ಜಿ ಉಪಸ್ಥಿತರಿದ್ದರು.