ಶಿವಮೊಗ್ಗ,ನ.04 : ನಾವು ನಮ್ಮ ಸಮಾಜದಲ್ಲಿ ಪುರುಷರು ಎದುರಿಸುತ್ತಿರುವ ವಿಶಿಷ್ಟ ಸವಾಲುಗಳು ಮತ್ತು ಸಮಸ್ಯೆಗಳನ್ನು ಪರಿಹರಿಸಲು, ಅವರ ಹಕ್ಕು ಮತ್ತು ಕಲ್ಯಾಣವನ್ನು ಪ್ರೋತ್ಸಾಹಿಸಲು ಭಾರತದಲ್ಲಿ ರಾಷ್ಟ್ರೀಯ ಪುರುಷರ ಆಯೋಗವನ್ನು ಸ್ಥಾಪಿಸುವುದಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಲ್ಯಾಣ ಸಂಸ್ಥೆ ಹೇಳಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಸಂತೋಷಕುಮಾರ್,ಹೆಂಗಸರು ಮತ್ತು ಪುರುಷರ ಸಂಬಂಧಿತ ಪ್ರಶ್ನೆಗಳಲ್ಲಿ ಈಗಿನ ಚರ್ಚೆಗಳು ವುರುಷರ ನಿರ್ದಿಷ ಸಮಸ್ಯೆಗಳನ್ನು ಹೆಚ್ಚು ಗಮನಿಸುವುದಿಲ್ಲ. ಮಾನಸಿಕ ಆರೋಗ್ಯ ಸಮಸ್ಯೆಗಳು, ಶೈಕ್ಷಣಿಕ ಅಸಮಾನತೆ, ಮತ್ತು ವುರುಷರ ವಿರುದ್ಧ ಹಿಂಸೆಯನ್ನು ಎದುರಿಸುತ್ತಿರುವ ಪುರುಷರ ಮೌನದ ಶ್ರಮಗಳಿಗೆ ಸಮರ್ಪಿತ ಗಮನ ಕೊಡಬೇಕು.
ಈ ಆಯೋಗವು ಸಂಶೋಧನೆ, ಹೋರಾಟ, ಮತ್ತು ನೀತಿ ರೂಪಣೆ ಮೂಲಕ ಇಂತಹ ವಿಷಯಗಳನ್ನು ಆಲಿಸಲು ಒಂದು ಪಮುಖ ವೇದಿಕೆಯನ್ನು ಒದಗಿಸುತ್ತದೆ ಎಂದರು.
ಪುರುಷರನ್ನು ಶೋಷಣೆ ಮತ್ತು ಹಿಂಸೆಯಿಂದ ರಕ್ಷಿಸಲು ಆಯೋಗವನ್ನು ಸ್ಥಾಪಿಸುವುದು ಅತ್ಯಾಚಾರ, ಮತ್ತು ಕೇಸರಿ ಗಲಭೆ ಸೇರಿದಂತೆ ಪುರುಷರಿಗೆ ತಪ್ಪು ಆರೋಪಗಳನ್ನು ಎದುರಿಸಲು ನ್ಯಾಯ ಒದಗಿಸುವುದು , ಪುರುಷರ ಮತ್ತು ಅವರ ಕುಟುಂಬದ ಮೂಲಭೂತ ಹಕ್ಕುಗಳನ್ನು ತಪ್ಪು ಆರೋಪಗಳಿಂದ ಕಾಪಾಡುವುದು ಉದ್ದೇಶ ಎಂದರು.
ಈ ಆಯೋಗವನ್ನು ರಚಿಸುವುದು ಭಾರತದ ಲಿಂಗ ಸಂಬಂಧಿತ ಚರ್ಚೆಯನ್ನು ಸಮಾನತೆ ಮತ್ತು ಸನ್ಮಾನದಿಂದ ಮುನ್ನಡೆಸಲು ಸಹಾಯಕರವಾಗುತ್ತದೆ, ಇದು ಕೊನೆಗೆ ಸಮಾಜಕ್ಕೆ ಒಟ್ಟಾರೆ ಹಿತವಾಗಿದೆ ಎಂದರು.