ಶಿವಮೊಗ್ಗ,ಅ.24: ದಾಖಲೆ ಪರಿಶೀಲನೆಗಾಗಿ ತಡೆದು ನಿಲ್ಲ್ಲಿಸಿದ್ದ ಕಾರನ್ನು ಅದರ ಮಾಲಕ ನಿಧಾನವಾಗಿ ಚಾಲನೆ ಮಾಡಿ ಪೊಲೀಸರ ಮೇಲೆ ಹತ್ತಿಸಲು ಹೋದಾಗ ಕಾನಸ್ಟೇಬಲ್ ಒಬ್ಬ ಬಾನೆಟ್ ಮೇಲೆ ಬಿದ್ದರೂ ಆತನನ್ನು ನೂರು ಮೀಟರ್‌ನಷ್ಟು ದೂರ ಎಳೆದೊಯ್ದ ಘಟನೆ ಗುರುವಾರ ಮಧ್ಯಾಹ್ನ ಸಹ್ಯಾದ್ರಿ ಕಾಲೇಜು ಬಳಿ ಸಂಭವಿಸಿದೆ.
ಟ್ರಾಫಿಕ್ ಸಿಬ್ಬಂದಿ ವಾಹನಗಳನ್ನು ತಡೆದು ನಿಲ್ಲಿಸಿ ದಾಖಲೆ ಪರಿಶೀಲನೆ ನಡನೆಸುತ್ತಿದ್ದ ವೇಳೆ ಭದ್ರಾವತಿ ಕಡೆಯಿಂದ ಬಂದ ಕಿಯಾ ಕಾರನ್ನು ತಡೆದಿದ್ದರು. ಕಾರು ನಿಲ್ಲಿಸಿದ ಮಾಲಕ ಪೇದೆಯ ಮೇಲೆ ಕಾರು ಹತ್ತಿಸುವ ರೀತಿ ವರ್ತಿಸಿದ್ದಾನೆ. ಪದೇ ಪದೇ ಹಿಂದಕ್ಕೆ ಕಾರನ್ನು ಸರಿಸುತ್ತಾ ನಿಲ್ಲಿಸುವಂತೆ ನಾಟಕ ಆಡಿದ್ದಾನೆ.
ನಂತರ ಕಾರಿನ ಮೂಲಕ ಪೇದೆಯನ್ನು ತಳ್ಳಿಕೊಂಡು ಮುಂದೆ ಚಲಾಯಿದ್ದನು. ಇದರಿಂದ ಬಾನೆಟ್ ಮೇಲೆ ಬಿದ್ದ ಪೇದೆಯನ್ನು ಗಮನಿಸಿಯೂ ಮುಂದಕ್ಕೆ ಚಾಲನೆ ಮಾಡಿಕೊಂಡು ಹೋಗಿ 100 ಮೀಟರ್ ವರೆಗೆ ಎಳೆದೊಯ್ದಿದ್ದಾನೆ.
ಪೇದೆಯ ಜೀವಕ್ಕೆ ಅಪಾಯವಾಗದೆ ಪಾರಾಗಿದ್ದಾರೆ. ಕಾರು ಚಾಯಿಸುತ್ತಿದ್ದವನ್ನು ತಕ್ಷಣವೇ ವಶಕ್ಕೆ ಪಡೆದ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಕಾರು ಚಲಾಯಿಸುತ್ತಿದ್ದವನನ್ನು ಭದ್ರಾವತಿಯ ಹೊಸಮನೆಯ ಕೇಬಲ್ ಆಪರೇಟರ್ ಮಿಥುನ್ ಜಗದಾಳೆ ಎಂದು ಗುರುತಿಸಲಾಗಿದೆ.