ಶಿವಮೊಗ್ಗ, ಮೇ.06 : ಭದ್ರಾವತಿಯಲ್ಲಿ ಕಳೆದ ರಾತ್ರಿ ಕ್ರಿಕೆಟ್ ಪಂದ್ಯದಲ್ಲಿ ನಡೆದ ಕಿರಿಕ್‌ನಿಂದ ಸಂಭವಿಸಿದ ಅರುಣ್ ಎನ್ನುವವನ ಕೊಲೆಯ ಆರೋಪಿಯಲ್ಲೊಬ್ಬನಾದ ಅರುಣ್‌ಕುಮಾರ್ ಎನ್ನುವವನ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಮಂಗಳವಾರ ಬಂಧಿಸಿದ್ದಾರೆ. 19 ವರ್ಷದ ಅರುಣ್‌ಕುಮಾರ್ ಮೇಲೆ 5 ಪ್ರಕರಣಗಳಿವೆ.
ಈ ಕೊಲೆಯ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲು ಹೋದಾಗ ಪೊಲೀಸರ ಮೇಲೆ ದಾಳಿ ನಡೆಸಲು ಮುಂದಾದನು. ಸ್ವಯಂ ರಕ್ಷಣೆಗಾಗಿ ಹೊಸಮನೆ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದರು.