ಬೆಂಗಳೂರು,ಜೂ.04 : ಕನ್ನಡದ ನಟಿ ಮತ್ತು ಮಾಜಿ ‘ಬಿಗ್ ಬಾಸ್ ಕನ್ನಡ’ ಸ್ಪರ್ಧಿ ಶುಭಾ ಪೂಂಜಾ ಮತ್ತು ಅವರ ಪತಿ ಸುಮಂತ್ ಬಿಲ್ಲವ ನಾಲ್ಕು ವರ್ಷಗಳ ದಾಂಪತ್ಯದ ನಂತರ ಪರಸ್ಪರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ದಂಪತಿಗಳು ಇತ್ತೀಚೆಗೆ ಕೌಟುಂಬಿಕ ನ್ಯಾಯಾಲಯಕ್ಕೆ ತಮ್ಮ ಅರ್ಜಿಯನ್ನು ಸಲ್ಲಿಸಿದ್ದಾರೆ. ನಾಲ್ಕು ವರ್ಷಗಳ ಕಾಲ ಒಟ್ಟಿಗೆ ಇದ್ದ ನಂತರ ದಂಪತಿಗಳು ತಮ್ಮ ದಾಂಪತ್ಯವನ್ನು ಕಾನೂನು ಬದ್ಧವಾಗಿ ಕೊನೆಗೊಳಿಸಲು ಕೌಟುಂಬಿಕ ನ್ಯಾಯಾಲಯವನ್ನು ಸಂಪರ್ಕಿಸಿದರು ಎನ್ನುವ ಮಾಹಿತಿ ಸಿಕ್ಕಿದೆ. ಈ ನಿರ್ಧಾರವು ಅಭಿಮಾನಿಗಳಿಗೆ ಅಚ್ಚರಿಯನ್ನುಂಟುಮಾಡಿದೆ, ಏಕೆಂದರೆ ಈ ಜೋಡಿಗಳನ್ನು ಸ್ಯಾಂಡಲ್‌ವುಡ್‌ನ ಅತ್ಯುತ್ತಮ ಮತ್ತು ಅನ್ಯೋನ್ಯ ಜೋಡಿಗಳಲ್ಲಿ ಒಂದೆಂದು ಪರಿಗಣಿಸಲಾಗಿತ್ತು.
ಸ್ಯಾಂಡಲ್ವುಡ್ ನಟಿ ಶುಭಾ ಪೂಂಜಾ ಅವರು ಜನವರಿ 5, 2022ರಲ್ಲಿ ಸುಮಂತ್ ಬಿಲ್ಲವ ಅವರ ಕೈ ಹಿಡಿದಿದ್ದರು. ಉದ್ಯಮಿ ಸುಮಂತ್ ಬಿಲ್ಲವ ಅವರು ಶುಭಾ ಪೂಂಜಾ ಅವರ ಬಹುಕಾಲದ ಗೆಳೆಯನಾಗಿದ್ದು, ಇಬ್ಬರು ಪ್ರೀತಿಸಿ ಮದುವೆ ಆಗಿದ್ರು.
ಕೊರೊನಾ ಸಮಯವಾದ ಹಿನ್ನೆಲೆ ಶುಭಾ ಪೂಂಜಾ ಅವರು ಆಗ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮಂಗಳೂರಿನ ಮಜಲುಬೆಟ್ಟು ಬೀಡುನಲ್ಲಿ ಶುಭ ಪೂಂಜಾ ಮದುವೆ ನಡೆದಿತ್ತು. ಕನ್ನಡ ನಟಿ ಮತ್ತು ಬಿಗ್ ಬಾಸ್ ಮಾಜಿ ಸ್ಪರ್ಧಿ ಶುಭಾ ಪೂಂಜಾ ಹಾಗೂ ಅವರ ಪತಿ ಸುಮಂತ್ ಬಿಲ್ಲವ ಮದುವೆಯಾಗಿ ನಾಲ್ಕೇ ವರ್ಷಕ್ಕೆ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನಕ್ಕೆ (ಡಿವೋರ್ಸ್) ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಲಾಗ್ತಿದೆ.
