ಬೆಂಗಳೂರು,ಜೂ.03 : ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ನಾನು ಇಂದು ಪ್ರಮಾಣ ವಚನ ಸ್ವೀಕರಿಸಿದ್ದೇನೆ. ಮುಖ್ಯಮಂತ್ರಿ ಯಾಗಿ ರಾಜ್ಯದ ಏಳುಕೋಟಿ ಜನತೆಯ ಸೇವೆ ಮಾಡಲು ಒದಗಿ ಬಂದಿರುವ ಈ ಅವಕಾಶ ನನ್ನ ಬದುಕಿನ ಭಾಗ್ಯ ಎಂದು ವಿನೀತನಾಗಿ ಸ್ವೀಕರಿಸಿದ್ದೇನೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಮುಖ್ಯಮಂತ್ರಿಗಳ ಅಕೃತ ‘ಎಕ್ಸ್’ ಖಾತೆ ಯಲ್ಲಿ ಪೋಸ್ಟ್ ಮಾಡಿದ್ದಾರೆ. ಮನೆ ಮಗನಂತೆ ಹರಸಿ, ಹಾರೈಸಿ ರಾಜಕೀಯ ಕ್ಷೇತ್ರದಲ್ಲಿ ಈ ಹಂತದ ವರೆಗೆ ನನ್ನನ್ನು ಬೆಳೆಸಿದ ಜನತಾ ಜನಾರ್ಧನರಿಗೆ ಕಾಯಾ ವಾಚಾ ಮನಸಾ ನನ್ನನ್ನು ಸಂಪೂರ್ಣವಾಗಿ ಅರ್ಪಿಸಿ ಕೊಂಡು, ಜನರ ಸೇವೆ ಮಾಡುತ್ತೇನೆ ಎಂದು ನಾನು ವಿನಯ ಪೂರ್ವಕವಾಗಿ ವಾಗ್ದಾನ ಮಾಡುತ್ತೇನೆ ಎಂದು ಹೇಳಿದ್ದಾರೆ.
ರಾಜ್ಯದ ಜನತೆಗೆ ನಮ್ಮ ಸರ್ಕಾರ ಮತ್ತು ಹೊಸ ಸಾರಥಿಯಾಗಿ ಬಂದಿರುವ ನನ್ನ ಬಗ್ಗೆ ಬಹಳ ನಿರೀಕ್ಷೆಗಳಿದೆ ಎನ್ನುವುದು ನನಗೆ ಗೊತ್ತಿದೆ. ಇಂದು ಕರ್ನಾಟಕ ಜಗಮೆಚ್ಚುತ್ತಿ ರುವ ಹೆಮ್ಮೆಯ ರಾಜ್ಯವಾಗಿದೆ. ಅಭಿವೃದ್ದಿ ಪಥದಲ್ಲಿರುವ ಕರ್ನಾ ಟಕವನ್ನು ಸಮೃದ್ಧ, ಸ್ವಾವ ಲಂಬಿ ಮತ್ತು ಸ್ವಾಭಿಮಾನಿ ರಾಜ್ಯವನ್ನಾಗಿ ರೂಪಿಸ ಬೇಕೆಂಬ ಕನಸು ನನ್ನದು.
ಅದನ್ನು ನನಸು ಮಾಡಲು ವಿಶ್ವಾಸಪೂರ್ವಕವಾಗಿ ಸಹಕಾರ ನೀಡಬೇಕೆಂದು ಏಳು ಕೋಟಿ ಕನ್ನಡಿ ಗರಲ್ಲಿ ಬೊಗಸೆಯೊಡ್ಡಿ ಕೇಳಿಕೊಳ್ಳುತ್ತಿದ್ದೇನೆ. ಪಕ್ಷದ ಮೇಲಿನ ನಿಷ್ಠೆ ಮತ್ತು ಜನಸೇವೆ ಮಾಡುವ ನನ್ನ ಮೇಲೆ ನಂಬಿಕೆ ಇಟ್ಟು ಸಿಎಂ ಆಗಿ ಸೇವೆಗೈಯ್ಯುವ ಅವಕಾಶ ನೀಡಿದ ಪಕ್ಷಕ್ಕೆ, ನಾಯಕ ನಾಗಿ ಆಯ್ಕೆ ಮಾಡಿರುವ ಶಾಸಕ ಮಿತ್ರರಿಗೆ ನಾನು ಆಭಾರಿಯಾಗಿದ್ದೇನೆ.
