ಆನಂದಪುರ ಬಳಿ ಹೆದ್ದಾರಿಗೆ ಮರ ಬಿದ್ದು ಶಿವಮೊಗ್ಗ ಸಂಚಾರ ಬಂದ್

Kranti Deepa

ಆನಂದಪುರ, ಜೂ.01 : ರಾಷ್ಟ್ರೀಯ ಹೆದ್ದಾರಿ-69ರ ಯಡೆಹಳ್ಳಿ ಪೆಟ್ರೋಲ್ ಬಂಕ್ ಸಮೀಪ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿರುವ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.

ನಿರಂತರ ಮಳೆಯಿಂದಾಗಿ ಮರ ತೆರವು ಕಾರ್ಯಾಚರಣೆಯಲ್ಲಿ ವಿಳಂಬವಾಗುವ ಸಾಧ್ಯತೆ ಇರುವುದರಿಂದ ಪ್ರಯಾಣಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಆನಂದಪುರ ಪೊಲೀಸ್ ಠಾಣೆಯ ಪಿಎಸ್‌ಐ ಮನವಿ ಮಾಡಿದ್ದಾರೆ.

ಶಿವಮೊಗ್ಗಕ್ಕೆ ತೆರಳುವವರು ರಿಪ್ಪನ್‌ಪೇಟೆ–ಆಯನೂರು ಮಾರ್ಗ ಬಳಸುವಂತೆ ಹಾಗೂ ಸಾಗರಕ್ಕೆ ತೆರಳುವವರು ಆಯನೂರು–ರಿಪ್ಪನ್‌ಪೇಟೆ–ಆನಂದಪುರ ಮಾರ್ಗ ಮೂಲಕ ಸಂಚರಿಸುವಂತೆ ಸೂಚಿಸಲಾಗಿದೆ.

ಸಾರ್ವಜನಿಕರು ಅನಗತ್ಯವಾಗಿ ಯಡೆಹಳ್ಳಿ ಭಾಗದತ್ತ ಪ್ರಯಾಣಿಸದೇ, ಸುರಕ್ಷತೆ ದೃಷ್ಟಿಯಿಂದ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಪೊಲೀಸರು ಕೋರಿದ್ದಾರೆ. ನಿರಂತರ ಮಳೆಯ ಹಿನ್ನೆಲೆಯಲ್ಲಿ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಸಲಹೆ ನೀಡಲಾಗಿದೆ.

Share This Article
";