ಎನ್ ಮಾಲತೇಶ್ ಅವರಿಗೆ ಹೃತ್ಪೂರ್ವಕ ಬೀಳ್ಕೊಡುಗೆ

Kranti Deepa

ಬೆಂಗಳೂರು ಮೇ.30 : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸುಮಾರು 40 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ಇಂದು ಸೇವಾ ವಯೋ ನಿವೃತ್ತಿ ಹೊಂದಿದ ಪ್ರ.ದ.ಸ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಎನ್ ಮಾಲತೇಶ ಅವರನ್ನು ಹೃತ್ಪೂರ್ವಕವಾಗಿ ಬೀಳ್ಕೊಡಲಾಯಿತು.

ವಾರ್ತಾ ಬಳಗ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನೌಕರರ ಸಾಲ ಸಹಕಾರ ಸಂಘ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿವಮೊಗ್ಗ ನಗರದ ಎನ್.ಮಾಲತೇಶ ಹಾಗೂ ಶ್ರೀಮತಿ ಜಯಲಕ್ಷ್ಮಿ ದಂಪತಿಗಳನ್ನು ಸನ್ಮಾನಿಸಿ,ಗೌರವಿಸಲಾಯಿತು.

ಎನ್.ಮಾಲತೇಶ ಅವರ ಸೇವಾ ಮನೋಭಾವ,ಸಂಘಟನಾ ಶಕ್ತಿ, ಸ್ನೇಹ ಸಂಬಂಧಗಳನ್ನು ಸಹೋದ್ಯೋಗಿಗಳು ಸ್ಮರಿಸಿದರು.

ಜಂಟಿ ನಿರ್ದೇಶಕರಾದ ಸಿ.ಆರ್.ನವೀನ್, ಮಂಜುನಾಥ ಡಿ.ಡೊಳ್ಳಿನ, ಸಿದ್ಧೇಶ್ವರಪ್ಪ ಜಿ.ಬಿ.ಮತ್ತಿತರರು ವೇದಿಕೆಯಲ್ಲಿದ್ದರು. ಅಮೃತಾ ಪ್ರಾರ್ಥಿಸಿದರು,ಚೇತನಕುಮಾರ್ ಬಿ.ವಿ.ಕಾರ್ಯಕ್ರಮ ನಿರೂಪಿಸಿದರು.

Share This Article
";