ಪೆಟ್ರೋಲ್, ಡೀಸೆಲ್ ದರ ಇಂದು ಮತ್ತೆ ಏರಿಕೆ

Kranti Deepa

ಶಿವಮೊಗ್ಗ, ,ಮೇ .19 : ಪೆಟ್ರೋಲ್ ದರದಲ್ಲಿ ಮತ್ತೆ ಏರಿಕೆಯಾಗಿದೆ. ಗ್ರಾಹಕರಿಗೆ ಪುನಃ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಇನ್ನೊಂದೆಡೆ  ಡೀಸೆಲ್  ದರದಲ್ಲಿ ಅತ್ಯಲ್ಪ ಇಳಿಕೆ  ಕಂಡುಬಂದಿದೆ.
ಸಾಮಾನ್ಯ ಪೆಟ್ರೋಲ್ ದರವು  ಪ್ರತಿ ಲೀಟರ್‌ಗೆ 95 ಪೈಸೆ ಹೆಚ್ಚಳವಾಗಿದೆ. ಇದರಿಂದಾಗಿ ಶಿವಮೊಗ್ಗದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 108.09 ಗೆ ತಲುಪಿದೆ. ಹಳೆಯ ದರ ಪ್ರತಿ ಲೀಟರ್‌ಗೆ 107.11 ಇತ್ತು. ಪ್ರೀಮಿಯಂ ಆವೃತ್ತಿಯಾದ ಪವರ್ ಪೆಟ್ರೋಲ್  ದರದಲ್ಲೂ 94 ಪೈಸೆ ಏರಿಕೆಯಾಗಿದೆ. ನಿನ್ನೆ ಪ್ರತಿ ಲೀಟರ್‌ಗೆ 117.05 ಇತ್ತು, ಇಂದು ಅದು ಪ್ರತಿ ಲೀಟರ್‌ಗೆ 117.99  ಕ್ಕೆ ತಲುಪಿದೆ.

ಡೀಸೆಲ್ ದರ 6 ಪೈಸೆ ಇಳಿಕೆ

ಸಾಮಾನ್ಯ ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ 6 ಪೈಸೆ ಇಳಿಕೆಯಾಗಿದೆ. ನಿನ್ನೆ ಪ್ರತಿ ಲೀಟರ್‌ಗೆ 95.18  ಇದ್ದ ಸಾಮಾನ್ಯ ಡೀಸೆಲ್ ಬೆಲೆ, ಇವತ್ತು ಪ್ರತಿ ಲೀಟರ್‌ಗೆ 95.12  ಆಗಿದೆ. ಆದರೆ, ಟರ್ಬೋಜೆಟ್ ಡೀಸೆಲ್ ದರವು ಪ್ರತಿ ಲೀಟರ್‌ಗೆ 94 ಪೈಸೆ ಹೆಚ್ಚಳವಾಗಿದೆ. ಇವತ್ತು ಇದರ ದರ ಪ್ರತಿ ಲೀಟರ್‌ಗೆ 99.69  ಕ್ಕೆ  ಏರಿದೆ.

Share This Article
";