ತಳಸಮುದಾಯದವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ನಾಯಕ : ಸಿದ್ದರಾಮಯ್ಯ

Kranti Deepa
ಪಾವಗಡ, ಮೇ 30: ಅಹಿಂದ ವರ್ಗದ ಧ್ವನಿಯಾಗಿದ್ದ ಹೆಚ್. ವೆಂಕಟರಮಣ್ಣಪ್ಪ ಅವರು ಸಮಾಜದ ತಳಸಮುದಾಯದವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ನಾಯಕರಾಗಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಪಾವಗಡ ವಿಧಾನಸಭಾ ಕ್ಷೇತ್ರದ  ಮಾಜಿ  ಸಚಿವರು ಮಾಜಿ  ಶಾಸಕರಾದ ದಿವಂಗತ ಶ್ರೀ ಹೆಚ್.  ವೆಂಕಟರಮಣಪ್ಪ ರವರ  ಅಂತಿಮ ದರ್ಶನ ಪಡೆದು ನಂತರ     ಮಾಧ್ಯಮದವರೊಂದಿಗೆ ಮಾತನಾಡಿದರು.
ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿದ್ದರು :
ಶ್ರೀ ಹೆಚ್. ವೆಂಕಟರಮಣ್ಣಪ್ಪ ಅವರು ಇತ್ತೀಚಿಗಷ್ಟೇ ನನ್ನನ್ನು ಭೇಟಿಯಾಗಿದ್ದರು.  ನಾಲ್ಕು ಬಾರಿ ಶಾಸಕರಾಗಿ, ಎರಡು ಬಾರಿ ಸಚಿವರಾಗಿ  ಸೇವೆ ಸಲ್ಲಿಸಿದ್ದರು. ಅಹಿಂದ ವರ್ಗದ ಧ್ವನಿಯಾಗಿದ್ದ ಅವರು ಸಮಾಜದ ತಳಸಮುದಾಯದವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದು, ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿದ್ದರು. ಸ್ವತ: ರೈತರಾಗಿದ್ದ ವೆಂಕಟರಮಣ್ಣಪ್ಪರು, ರೈತರ ಏಳಿಗೆಗೆ ಬಹುವಾಗಿ ಶ್ರಮಿಸಿದ್ದರು ಎಂದರು.
ಅವರ ನಿಧನದಿಂದ ರಾಜ್ಯಕ್ಕೆ ಅಪಾರ ನಷ್ಠ:
ಅವರೊಂದಿಗೆ ಉತ್ತಮ ಒಡನಾಟವಿದ್ದು, ಅಪಾರ ಸ್ನೇಹಾಭಿಮಾನ ಹೊಂದಿದ್ದರು. ವೆಂಕಟರಮಣ್ಣಪ್ಪ ರ ಪುತ್ರರು ಶಾಸಕರಾಗಿ ಸೇವೆ ಸಲ್ಲಿಸುತ್ತಿದ್ದು, ತಮ್ಮ ತಂದೆಯವರ ಆದರ್ಶಗಳ ಹಾದಿಯಲ್ಲಿ ನಡೆಯುವರೆಂಬ ವಿಶ್ವಾಸವಿದೆ. ಅವರ ಅಕಾಲಿಕ ನಿಧನದಿಂದ ರಾಜ್ಯಕ್ಕೆ ಅಪಾರ ನಷ್ಟವಾಗಿದೆ.ವೆಂಕಟರಮಣ್ಣಪ್ಪರ ಆತ್ಮಕ್ಕೆ ಶಾಂತಿಯನ್ನು ಕೋರುವ ಜೊತೆಗೆ, ಅವರ ಕುಟುಂಬದವರು ಮತ್ತು ಅಭಿಮಾನಿ ಬಳಗಕ್ಕೆ ಅವರ ಅಗಲಿಕೆಯ ದು:ಖವನ್ನು ಭರಿಸುವ ಶಕ್ತಿಯನ್ನು  ಭಗವಂತನು ನೀಡಲೆಂದು ಪ್ರಾರ್ಥಿಸುವುದಾಗಿ ತಿಳಿಸಿದರು.

Share This Article
";