ಬೆಂಗಳೂರು, ಜೂ.01 : ರಾಜ್ಯದ ನೂತನ ಮುಖ್ಯಮಂತ್ರಿಗಳ ಪ್ರಮಾಣ ವಚನ ಕಾರ್ಯಕ್ರಮವು ಜೂನ್ 01 ರ ಬದಲಾಗಿ, ಜೂನ್ 03 ರಂದು ಮಧ್ಯಾಹ್ನ 4 ಗಂಟೆಗೆ ನಡೆಯಲಿದೆ. ಮಾತ್ರವಲ್ಲದೇ, ವಿಧಾನಸೌಧದ ಮುಂಭಾಗದ ಬದಲು, ಲೋಕಭವನದಲ್ಲಿ (ರಾಜಭವನ) ಜರುಗಲಿದೆ. ಈ ಬಗ್ಗೆ ಕೆಪಿಸಿಸಿ ಅಧಿಕೃತ ಮಾಹಿತಿ ಹಂಚಿಕೊಂಡಿದೆ.
ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ ಮಾಡುವುದು ಬಹುತೇಕ ನಿಶ್ಚಿತವಾಗಿದೆ. ಇನ್ನೂ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ನಡೆಸಬೇಕು ಎಂದುಕೊಂಡಿದ್ದರು. ಆದರೆ, ಶನಿವಾರ ನಡೆದ ಸಭೆಗಳಲ್ಲಿ ಕಾರ್ಯಕ್ರಮ ಸರಳವಾಗಿರಲಿದೆ ಎಂದು ಕೆಪಿಸಿಸಿ ಮುಖಂಡರು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ತಿಳಿಸಿದ್ದಾರೆ. ಪ್ರಮಾಣ ವಚನ ಜೂನ್ 03 ರಂದು ಲೋಕಭವನದ ಗಾಜಿನ ಮನೆಯಲ್ಲಿ ನಡೆಯಲಿದೆ. ಅತ್ಯಂತ ಸರಳವಾಗಿ ನಡೆಯಲಿದೆ. ಯಾವುದೇ ಪಾಸ್ ವ್ಯವಸ್ಥೆ ಮಾಡಿಲ್ಲ. ಜಿಲ್ಲಾವಾರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದು ಬೇಡ ಎಂದು ಮನವಿ ಮಾಡಿದರು.
