ಸಾಗರ : ಚಿರತೆ ಉಗುರು ಮತ್ತು ಹಲ್ಲುಗಳ ಅಕ್ರಮ ಸಾಗಣೆ-ಮಾಲು ಸಮೇತ ಆರೋಪಿ ವಶಕ್ಕೆ

Kranti Deepa

ಸಾಗರ, ನ.05 : ಇಲ್ಲಿನ ಆನಂದಪುರದ ದಾಸಕೊಪ್ಪ ಸರ್ಕಲ್ ಪೆಟ್ರೋಲ್ ಬಂಕ್ ಹತ್ತಿರ ಪೊಲೀಸ್ ಅರಣ್ಯ ಸಂಚಾರಿದಳದ ಸಬ್ ಇನ್ಸ್‌ಪೆಕ್ಟರ್ ವಿನಾಯಕ್ ನೇತೃತ್ವದಲ್ಲಿ ದಾಳಿ ನಡೆದಿದೆ. ಕಾನೂನು ಬಾಹಿರವಾಗಿ ಚಿರತೆಯ ಉಗುರು ಹಾಗೂ ಚಿರತೆಯ ಹಲ್ಲುಗಳ ಅಕ್ರಮ ಸಾಗಾಟದಲ್ಲಿ ತೊಡಗಿದ್ದ ಶಿಕಾರಿಪುರ ತಾಲೂಕಿನ ಹಾರೇಗೊಪ್ಪದ ಲೋಕೇಶ್ ಎಂಬಾತನನ್ನು
ವಶಕ್ಕೆ ಪಡೆದಿದ್ದಾರೆ.

ಆರೋಪಿಯನ್ನು ಪರಿಶೀಲಿಸಿದಾಗ ಆರೋಪಿಯ ಬಳಿ ಚಿರತೆಯ 16 ಉಗುರು ಮತ್ತು ಚಿರತೆಯ 3 ಹಲ್ಲುಗಳು ಪತ್ತೆಯಾಗಿದೆ.ಇದನ್ನು ಪೋಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿ ಲೋಕೇಶನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸಂಧರ್ಭದಲ್ಲಿ ಪೋಲೀಸ್ ಅರಣ್ಯ ಸಂಚಾರಿದಳದ ಸಿಬ್ಬಂದಿಗಳಾದ ಗಣೇಶ್,ವಿಶ್ವನಾಥ್,ಆಂಜನೇಯ,ದಿನೇಶ್,
ಪ್ರಮೋದಕುಮಾರಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Share This Article
";