ಸಾಲಬಾಧೆ: ರೈತ ಮಹಿಳೆ ಆತ್ಮಹತ್ಯೆ

Kranti Deepa

ಶಿವಮೊಗ್ಗ,ನ.06: ಹೆದ್ದಾರಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲೂರು ಗ್ರಾಮದ ರೈತ ಮಹಿಳೆ ಮೋಹಿನಿ ( 65) ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಕಾಲಿಕ ಮಳೆಯಿಂದಾಗಿಭತ್ತ, ಶುಂಠಿ ಬೆಳೆ ಹಾನಿಗೀಡಾಗಿತ್ತು.

ಸಹಕಾರ ಸಂಘದಲ್ಲಿ ಪಡೆದ ಸಾಲ ತೀರುವಳಿ ಮಾಡುವ ಖಿನ್ನತೆಗೆ ಒಳಗಾಗಿದ್ದರು. ಸೋಮವಾರ ಮನೆಯಲ್ಲಿ ವಿಷ ಸೇವಿಸಿದ್ದ ಅವರನ್ನು ತಕ್ಷಣ ಶಿವಮೊಗ್ಗದ ಮೆಗ್ಗಾನ್ಗೆ ಸೇರಿಸಲಾಗಿ್ತು. ಮ೦ ಗ ಳ ವಾ ರ ಮೃತಪಟ್ಟಿದ್ದಾರೆ.

ತಳಲೆ ಸಹಕಾರ ಬ್ಯಾಂಕ್ ಮತ್ತು ಜಿಲ್ಲಾ ಸಹಕಾರ ಸಂಘದ – ಸ್ವಸಹಾಯ ಸಂಘ ಮತ್ತು ಖಾಸಗಿ ಸೇರಿ ಒಟ್ಟು 3 7 ಲಕ್ಷ ಸಾಲ ಮಾಡಿದ್ದರು ಎಂದು ದೂರಿನಲಿ ತಿಳಿಸಲಾಗಿದೆ. ಮಗ ನೀಡಿದ ದೂರಿನ ಅನ್ವಯ ರಿಪ್ಪನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
";