ಬೆಂಗಳೂರು ಸೆ.06: ಬೋಜನಾಯ್ಕ ಕುವೆಂಪು ವಿಶ್ವವಿದ್ಯಾಲಯ ದಲ್ಲಿ ಕೈಗಾರಿಕಾ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಡೀನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕುವೆಂಪು ವಿಶ್ವ ವಿದ್ಯಾನಿಲಯ ದ ಕುಲಸಚಿವರಾಗಿ ಕೆಲಸ ಮಾಡಿದ್ದಾರೆ. ಈ ಅವಧಿಯಲ್ಲಿ ವಿಶ್ವವಿದ್ಯಾನಿಲದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದ್ದವು.
ಸಂಶೋದನೆಗೆ ಭೋಜನಾಯ್ಕ ಹೆಚ್ಚು ಒತ್ತು ನೀಡಿದ್ದರು.ಅಕಾಡೆಮಿಕ್ ಆಗಿ ಕುವೆಂಪು ವಿಶ್ವವಿದ್ಸನಿಲಯ ದೇಶದಲ್ಲಿ ಹೆಗ್ಗುರುತು ಮೂಡಿಸಿತ್ತು. ಇವರ ಅವಧಿಯಲ್ಲಿ ನ್ಯಾಕ್ ಕಮಿಟಿ ದೇಶದ ಉತ್ತಮ ವಿಶ್ವ ವಿದ್ಯಾನಿಲಯ 73 ನೇ ಸ್ಥಾನ ಪಡೆದಿತ್ತು. ಟಾಪ್ ಟೆನ್ ಲೀಸ್ಟ್ ನಲ್ಲಿ ಕುವೆಂಪು ವಿವಿಯನ್ನು ತರಬೇಕು ಎಂಬುದು ಬೋಜನಾಯ್ಕ್ ಗುರಿಯಾಗಿತ್ತು.
ಆದರೆ ಬೋಜನಾಯ್ಕ ವಿರೋದಿ ಬಣ ಇವರ ಅವಧಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ ಎಂದು ರಾಜ್ಯಪಾಲರಿಗೆ. ಲೋಕಾಯುಕ್ತರಿಗೆ ದೂರು ನೀಡಿತ್ತು.ಈ ಕಾರಣದಿಂದ ಕಳೆದ ಬಾರಿ ಕುವೆಂಪು ವಿವಿ ಕುಲಪತಿಗಳಾಗುವ ಅವಕಾಶದಿಂದ ವಂಚಿತರಾದರು. ಆದರೆ ಈ ಬಾರಿ ಕೆಪಿಎಸ್ಸಿ ಗೆ ಭೋಜಾನಾಯ್ಕ್ ಹೆಸರು ಶಿಪಾರಸ್ಸು ಮಾಡಿದಾಗಲು ವಿರೋಧಿ ಬಣ ತಡೆಯೊಡ್ಡಿತ್ತು.
ಸರ್ಕಾರದ ಮಟ್ಣದಲ್ಲಿ ಕುಲಂಕುಶ ತನಿಖೆಯಾದಾಗ ಬೋಜನಾಯ್ಕ್ ಮೇಲಿರುವ ಆರೋಪಗಳೆಲ್ಲ ಸುಳ್ಳು ಎಂದು ಸಾಭೀತಾಯಿತು.ಇದನ್ನು ಮನಗಂಡ ಸರ್ಕಾರ ಬೋಜನಾಯ್ಕರನ್ನ ಕೆಪಿಎಸ್ಸಿ ಸದಸ್ಯರನ್ನಾಗಿ ಆಯ್ಕೆ ಮಾಡಿದೆ.