ಶಿವಮೊಗ್ಗ, ಜೂ.08 : ಶಾಸಕ ಗೋಪಾಲಕೃಷ್ಣ ಬೇಳೂರು ಅವರನ್ನು ಹಿರಿತನದ ಆಧಾರದಲ್ಲಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕೆಂದು ಸಾಗರದ ಕಾಂಗ್ರೆಸ್ ಮುಖಡಂರು ಆಗ್ರಹಿಸಿದ್ದಾರೆ.
ಸೋಮವಾರ ಪ್ರೆಸ್ ಟ್ರಸ್ಟಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ತಾಲೂಕು ಕಾಂಗ್ರ್ರೆಸ್ ಅಧ್ಯಕ್ಷ ಬಿ ಆರ್ ಜಯಂತ್, ಬೇಳೂರು 3 ನೇ ಬಾರಿ ಶಾಸಕರಾಗಿದ್ದಾರೆ. ಸಣ್ಣ ರೈತ ಕುಟುಂಬದಲ್ಲಿ ಹುಟ್ಟಿ ಹಿಂದುಳದ ವರ್ಗದ ನಾಯಕರಾಗಿದ್ದಾರೆ. ಬಹು ದೊಡ್ಡ ವ್ಯಾಪ್ತಿಯ ಸಾಗರ ವಿಧಾನಸಭಾ ಕ್ಷೇತ್ರವಾದ ಸಾಗರ ತಾಲ್ಲೂಕು ಹಾಗೂ ಹೊಸನಗರ ತಾಲ್ಲೂಕು ಈ 2 ತಾಲೂಕುಗಳನ್ನು ಬಹಳ ಯಶಸ್ವಿಯಾಗಿ ನಡೆಸಿಕೊಂಡು ಹೊಗುತ್ತಿದ್ದಾರೆ. ಕ್ಷೇತದಲ್ಲಿ ಅಭಿವೃದ್ಧಿಯ ಹರಿಕಾರರಾಗಿ, ಜನ ಮನ್ನಣೆ ಗಳಿಸಿದ್ದಾರೆ. ದುರ್ಬಲರಿಗೆ, ಜನರ ಕಷ್ಟ ಕಾರ್ಪಣ್ಯಕ್ಕೆ ವೈಯಕ್ತಿವಾಗಿ ಸಹಾಯ ಮಾಡಿಕೊಂಡು ಬರುತ್ತಿದ್ದಾರೆ ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ ಬಿ.ಜೆ.ಪಿ ಯನ್ನು ಎದುರಿಸಲು ಸಮರ್ಥ ನಾಯಕತ್ವ ಬೇಕಾಗಿದೆ. ಈ ಹಿಂದೆ ಕಾಂಗ್ರೇಸ್ ಭದ್ರಕೋಟೆಯಾಗಿರುವ ಶಿವಮೊಗ್ಗ ಜಿಲ್ಲೆಯನ್ನು ಮತ್ತೆ ಯಥಾಸ್ಥಿತಿಗೆ ತರಲು ಜಿಲ್ಲೆಗೆ ಬೇಳೂರು ಅವರ ನಾಯಕತ್ವ ಬೇಕು. ಮಲೆನಾಡು ಜಿಲ್ಲೆಯಾಗಿರುವುದರಿಂದ ಅರಣ್ಯ ಹಕ್ಕು ಸಮಸ್ಯೆ ಮತ್ತು ಶರಾವತಿ ಮುಳಗಡೆ ಸಂತ್ರಸ್ಥ ರೈತರ ಹಿತವನ್ನು ಕಾಪಾಡಲು ಬೇಳೂರು ನಾಯಕತ್ವ ಬೇಕು. ಮಲೆನಾಡಿನ ಅಭಿವೃದ್ಧಿಗೆ ವಿಶೇಷವಾದ ಅನುದಾನ ತಂದು ಶಿವಮೊಗ್ಗ ಜಿಲ್ಲೆಯ ರೈತರ ಹಿತಕಾಯಬೇಕಿದೆ. ಎಂದರು.
ಮಧು ಬಂಗಾರಪ್ಪ 3 ವರ್ಷಗಳ ಕಾಲ ಸಚಿವರಾಗಿ ಯಶಸ್ವಿಯಾಗಿ ಆಡಳಿತ ನಡೆಸಿದ್ದಾರೆ. ಜಿಲ್ಲೆಯ ರಾಜಕೀಯ ಸಮನ್ವಯ ಕಾಪಾಡಲು, ಪಕ್ಷದ ಹಿತದೃಷ್ಠಿಯಿಂದ ಉಳದ 2 ವರ್ಷಗಳನ್ನು ಗೋಪಾಲಕೃಷ್ಣ ಬೇಳೂರು ಅವರನ್ನು ಮಂತ್ರಿಮಂಡಲದಲ್ಲಿ ಸೇರ್ಪಡೆ ಮಾಡಿಕೊಳ್ಳಬೇಕು. ಈ ಇಬ್ಬರೂ ನಾಯಕರು ಅಧಿಕಾರ ಹಾಗೂ ಪಕ್ಷ ಮುನ್ನಡೆಸುವಲ್ಲಿ ಬಹಳ ಸಮರ್ಥರಿದ್ದಾರೆ. ಆದ್ದರಿಂದ 2028 ರಲ್ಲೂ ಪಕ್ಷವನ್ನು ಅಧಿಕಾರ ತರುವಲ್ಲಿ ಯಶಸ್ವಿಯಾಗಲಿದ್ದಾರೆ ಎಂದರು.
ಹಿಂದುಳಿದ ವರ್ಗದ ಎ.ಐ.ಸಿ.ಸಿ ರಾಷ್ಟ್ರೀಯ ಪ್ರಧಾನ ಕಾರ್ಯದಶಿ ಶ್ರೀ ಬಿ.ಕ ಹರಿಪ್ರಸಾದ್ ಕೆ.ಪಿ.ಸಿ.ಸಿ ಅಧ್ಯಕ್ಷರಾಗಿದ್ದಾರೆ. ಅವರಿಗೂ ಸಹ ಅಭಿನಂದನೆ ತಿಳಿಸುವುದಾಗಿ ಹೇಳಿದ ಅವರು, ಹರಿಪ್ರಸಾದ್ ಬಹಳ ಅನುಭವ ಹೊಂದಿರುವ ಕಾರಣ ಬಹಳ ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಜಿಪಂ ಮಾಜಿ ಸದಸ್ಯೆ ಅನಿತಾ, ತಾಪಂ ಮಾಜಿ ಸದಸ್ಯ ಸೋಮಶೇಖರ ಲ್ಯಾವಿಗೆರೆ ಮೊದಲಾದವರಿದ್ದರು.
