ಶಿವಮೊಗ್ಗ, ಜೂ.06 : ರಾಜ್ಯದಲ್ಲಿ ಈ ಹಿಂದಿನಿಂದಲೂ ಸರ್ಕಾರಗಳು ಸಾಮಾಜಿಕ ಭದ್ರತಾ ಯೋಜನೆಯಡಿ ವಿವಿಧ ಪಿಂಚಣಿಗಳನ್ನು ನೀಡುತ್ತಾ ಬಂದಿವೆ. ಆದರೆ ಗ್ಯಾರಂಟಿ ಯೋಜನೆಗಳ ಭರಾಟೆಯಲ್ಲಿ ನಿರ್ಗತಿಕರ ಪಿಂಚಣಿಯನ್ನು ತಡೆ ಹಿಡಿಯಲಾಗಿದೆ.
ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಶಾಸಕ ಎಸ್ ಎನ್ ಚನ್ನಬಸಪ್ಪ, ಸಾಮಾಜಿಕವಾಗಿ ಬದುಕಲು ಅಶಕ್ತರಾದ ವರ್ಗಗಳಿಗೆ ಪಿಂಚಣಿ ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಯೋಜನೆ ರೂಪಿಸಲಾಗಿದೆ. ಈ ಹಿಂದಿನ ಬಿ.ಜೆ.ಪಿ. ಸರ್ಕಾರದ ಅವಧಿಯಲಿ ನವೋದಯ ಎಂಬ ಮೊಬೈಲ್ ಆಪ್ ಮೂಲಕ ಕಂದಾಯ ಇಲಾಖೆ ಅಧಿಕಾರಿಗಳ ಮೂಲಕ ಮನೆ ಬಾಗಿಲಿಗೆ ಮಾಸಾಶನ ಯೋಜನೆ ಜಾರಿಗೆ ತಂದು ಸರಳೀಕರಣ ಮಾಡಲಾಗಿತ್ತು. ಆದರೆ ಪ್ರಸ್ತುತ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಮನೆ ಬಾಗಿಲಿಗೆ ಮಾಶಾಸನ ಯೋಜನೆಯನ್ನು ರದ್ದು ಮಾಡಿದೆ ಎಂದರು.
ಪ್ರತಿ ತಿಂಗಳು ಮಾಸಾಶನ ಮಂಜೂರು ಮಾಡುತ್ತಿಲ್ಲ. 3-4 ತಿಂಗಳಿಗೊಮ್ಮ ಬಿಡುಗಡೆ ಮಾಡಿ ಅದರಲ್ಲಿ ಒಂದೋ, ಎರಡೋ ತಿಂಗಳ ಹಣ ಮಾತ್ರ ಅಸಮರ್ಪಕವಾಗಿ ಫಲಾನುಭವಿಗಳಿಗೆ ನೀಡಲಾಗುತ್ತಿದೆ. ಪ್ರಸ್ತುತ ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ವಿವಿಧ ತಾಂತ್ರಿಕ ಕಾರಣಗಳನ್ನು ನೀಡಿ ಅರ್ಜಿ ಸಲ್ಲಿಸದಂತೆ ತಡೆ ಹಿಡಿಯಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ 59 ಸಾವಿರ ಜನರ ಪಿಂಚಣಿಗೆ ತಡೆ :
ಶಿವಮೊಗ್ಗ ತಾಲೂಕು 12,672, ಭದ್ರಾವತಿ 13,408, ಶಿಕಾರಿಪುರ 13,277 , ಸಾಗರ 4,503 , ಸೊರಬ 9,862 , ತೀರ್ಥಹಳ್ಳಿ 2,903 ಮತ್ತು ಹೊಸನಗರ 3,222 ರದ್ದಾದ ಜಿಲ್ಲೆಯ ಒಟ್ಟು ಪಿಂಚಣಿಗಳು- 59,847 . ಜಿಲ್ಲೆಯಲ್ಲಿ ಮಾಸಿಕ ಒಟ್ಟು 5,98,47,000 ರೂ. ಮೊತ್ತದ ಪಿಂಚಣಿಯನ್ನು ತಡೆ ಹಿಡಿಯಲಾಗಿದೆ.
ಶಿವಮೊಗ್ಗ ನಗರ ದಲ್ಲಿ ರದ್ದು ಮಾಡಲಾದ ಪಿಂಚಣಿವಾರು ವಿವರ : ನಿರ್ಗತಿಕ ವಿಧವಾ ಪಿಂಚಣಿ 1907 , ಸಂಧ್ಯಾ ಸುರಕ್ಷಾ 1062 , ಹಿರಿಯ ನಾಗರಿಕ ಪಿಂಚಣಿ 1781 , ಅಂಗವಿಕಲ ಪೋಷಣಾ ಪಿಂಚಣಿ 706, ಅವಿವಾಹಿತ ಮಹಿಳೆಯರ ’ಮನಸ್ವಿನಿ’ -141, ತೃತೀಯ ಲಿಂಗಿಗಳ ‘ಮೈತ್ರಿ’ ಪಿಂಚಣಿ -4, ನಗರದಲ್ಲಿ ರದ್ದಾದ ಒಟ್ಟು ಪಿಂಚಣಿಗಳು 5603
ಶಿವಮೊಗ್ಗ ನಗರದಲ್ಲಿ ಪ್ರತಿ ತಿಂಗಳು 56 ಲಕ್ಷ ಮೊತ್ತದ ಪಿಂಚಣಿಗಳನ್ನು ತಡೆ ಹಿಡಿಲಾಗಿದೆ. (3 ತಿಂಗಳಿನಿಂದ ಒಂದು ರೂ ಸಹ ನೀಡಿಲ್ಲ.)
ಪಿಂಚಣಿದಾರರ ಮನೆಯ ವಾರ್ಷಿಕ ಆದಾಯ ಕನಿಷ್ಠ ರೂ. 32,000 ಇರಬೇಕು ಎಂಬ ಕಾರಣ ನೀಡಿ ರದ್ದು ಮಾಡಲಾಗುತ್ತಿದೆ. ರೂ. 32,000 ವಾರ್ಷಿಕ ಆದಾಯದ ಮಿತಿಯನ್ನು ಪರಿಷ್ಕರಿಸಿ ೮ ವರ್ಷಗಳಾಗಿವೆ. ಈವರೆಗೂ ಸರ್ಕಾರ ಯಾವುದೇ ಪರಿಷ್ಕರಣೆ ಮಾಡದೇ ಏಕಾಏಕಿ ರದ್ದು ಸಮಾಜದಲ್ಲಿರುವ ದುರ್ಬಲರನ್ನು ಮಾಡುತ್ತಿರುವುದು ಇನ್ನಷ್ಟು ಅಶಕ್ತರನ್ನಾಗಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
