ಜುಲೈ 31: ಮಂಡ್ಯದಲ್ಲಿ ಬಿಜೆಪಿಯಿಂದ ಪ್ರತಿಭಟನೆ: ಬಿ.ವೈ. ವಿಜಯೇಂದ್ರ

Kranti Deepa

ಶಿವಮೊಗ್ಗ: “ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಜುಲೈ 31  ರಂದು ಮಂಡ್ಯದಲ್ಲಿ ಭಾಜಪ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾವೇರಿ ಕೊಳ್ಳದ ರೈತರ ಹಿತ ಕಾಪಾಡಲು ರಾಜ್ಯ ಬಿಜೆಪಿಯು ಪ್ರತಿಭಟನೆಯನ್ನು ನಡೆಸಲಿದ್ದು, ಇದಕ್ಕೆ ಅಲ್ಲಿನ ರೈತ ಸಂಘಗಳು, ಸಂಘ ಸಂಸ್ಥೆಗಳು ಬೆಂಬಲಿಸಬೇಕು ಎಂದರು. ಕಾವೇರಿ ಕೊಳ್ಳದ ವಿಚಾರದಲ್ಲಿ ಭಾಜಪ ಅಲ್ಲಿನ ರೈತರ ಪರವಾಗಿರಲಿದೆ ಎಂದರು.

“ಕಾವೇರಿ ನೀರು ನಿರ್ವಹಣಾ ಸಮಿತಿ ನೀಡಿರುವ ತೀರ್ಮಾನ ಕಾವೇರಿ ಕೊಳ್ಳದ ರೈತರಿಗೆ ಬರೆ ಎಳೆದಂತೆ ಆಗಿದೆ. ಸಿಎಂ ಕಾವೇರಿ ಕೊಳ್ಳದ ರೈತರಿಗೆ ಬಿತ್ತನೆ ಮಾಡಬಾರದು ಎಂದು ಕರೆ ನೀಡಿದ್ದರು. ಆದರೆ ಸಿಎಂ ರೈತರ ಆತ್ಮವಿಶ್ವಾಸ ಕುಗ್ಗಿಸುವ ರೀತಿಯಲ್ಲಿ ಮಾತನಾಡಿದ್ದರು. ತಮಿಳುನಾಡು ಸಿಎಂಗೆ ಖುಷಿ ಪಡಿಸಲು ರಾತ್ರೋರಾತ್ರಿ ನೀರು ಬಿಟ್ಟಿದ್ದರು. ನಿಮಗೆ ಬರ ಇದೆ ಎಂದು ಗೂತ್ತಿರಲಿಲ್ವಾ. 17.39  ಟಿಎಂಸಿ ನೀರು ಇದೆ. ನಿನ್ನೆ ತೀರ್ಪಿನಂತೆ ಪ್ರತಿನಿತ್ಯ ನೀರು ಬಿಟ್ಟರೆ ಕಾವೇರಿ ಕೊಳ್ಳದ ರೈತರು ಎಲ್ಲಿಗೆ ಹೋಗಬೇಕು” ಎಂದು ಬಿವೈವಿ ಪ್ರಶ್ನೆ ಮಾಡಿದರು.

“ರಾಜ್ಯದ ಸಿಎಂ ಅವರು ಕಾವೇರಿ ಕೊಳ್ಳದ ರೈತರ ಜೀವನದ ಜೊತೆ ಚೆಲ್ಲಾಟ ಆಡುತ್ತಿದ್ದಿರಿ. ನೀವು ಸಿಡ್ಲ್ಯೂಸಿಗೆ ಮರು ಅರ್ಜಿ ಸಲ್ಲಿಸಬೇಕೆಂದರು. ಸಚಿವ ಸಂಪುಟ ವಿಸ್ತರಣೆಗೆ ದೆಹಲಿಗೆ ಹೋಗುವ ನೀವು ವಕೀಲರ ಜೊತೆ ಯಾಕೆ ಚರ್ಚೆ ನಡೆಸಿಲ್ಲ.   ಎಫ್‌ಐಆರ್? ಹಾಕಿ ಬೆದರಿಸುವ ಕೆಲಸ ಮಾಡುತ್ತಿದ್ದೀರಿ. ಇಂತಹ ಕೀಳು ಮಟ್ಟದ ರಾಜಕೀಯ ಮಾಡಬಾರದು. ಸಾಮಾಜಿಕ ಕಾರ್ಯಕರ್ತನ ವಿರುದ್ಧ ಎಫ್‌ಐಆರ್ ಹಾಕಿ ಜೈಲಿಗೆ ಕಳುಹಿಸಲು ಮುಂದಾಗಿರುವುದು ಸರಿಯಲ್ಲ. ಹಿಂದೂಗಳ ಕುರಿತು ಕಪಟ ರಾಜಕಾರಣ ಮಾಡಬಾರದು” ಎಂದರು.

ರಾಜಕೀಯ ಒತ್ತಡ:
ಕಾಂಗ್ರೆಸ್ ಸರ್ಕಾರ ರಾಜಕೀಯ ಒತ್ತಡಕ್ಕೆ ಮಣಿದು, ವಿಧಾನ ಪರಿಷತ್ ಸದಸ್ಯರಾದ ಸಿ.ಟಿ. ರವಿ ಅವರ ಹೇಳಿಕೆಯನ್ನೇ ನೆಪ ಮಾಡಿಕೊಂಡು ಅವರನ್ನು ಬಂಧಿಸಲು ಪೊಲೀಸರನ್ನು ಕಳುಹಿಸಿರುವುದು ಖಂಡನೀಯ ಎಂದ ಅವರು,  ಸರ್ಕಾರವು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗೌರವಿಸುವ ಬದಲು ರಾಜಕೀಯ ದ್ವೇಷದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದೆ ಎಂದು ಟೀಕಿಸಿದರು. ವಿರೋಧ ಪಕ್ಷದ ನಾಯಕರ ಧ್ವನಿಯನ್ನು ಹತ್ತಿಕ್ಕಲು ಪೊಲೀಸ್ ಇಲಾಖೆಯನ್ನು ಬಳಸುವುದು ಸರಿಯಲ್ಲ.  “ಈ ರೀತಿಯ ದಬ್ಬಾಳಿಕೆ ಮತ್ತು ಅಧಿಕಾರ ದುರುಪಯೋಗ ಹೀಗೆಯೇ ಮುಂದುವರಿದರೆ, ರಾಜ್ಯದಲ್ಲಿ ಉಂಟಾಗುವ ಯಾವುದೇ ಅನಾಹುತಗಳಿಗೆ ಕಾಂಗ್ರೆಸ್ ಸರ್ಕಾರವೇ ಸಂಪೂರ್ಣ ಹೊಣೆಗಾರಿಯಾಗಲಿದೆ” ಎಂದು ವಿಜಯೇಂದ್ರ ಎಚ್ಚರಿಕೆ ನೀಡಿದರು.

Share This Article
";