ಶಿವಮೊಗ್ಗ,ಮೇ.16 : ಶಿವಮೊಗ್ಗವನ್ನು ಕೇಂದ್ರವಾಗಿಟ್ಟುಕೊಂಡು ಮಲೆನಾಡಿನಲ್ಲಿ ಕಳೆದ ೨೫ ವರ್ಷಗಳಿಂದ ಉದ್ಯಮ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಜಿ. ಆರ್. ಎಂಟರ್ ಪ್ರೈಸಸ್ ಸಂಸ್ಥೆಯ ಪಾಲುದಾರರು ಇದೀಗ ಯಡಗೆರೆ ಎಂಟರ್ ಪ್ರೈಸಸ್ ಹೆಸರಿನ ಸಂಸ್ಥೆಯೊಂದನ್ನು ಹುಟ್ಟು ಹಾಕಿದ್ದು, ಇದರ ಮೂಲಕ ಗೃಹಪಯೋಗಿ ಉತ್ಪನ್ನಗಳ Home Appliance Product ಗಳ ತಯಾರಿಕೆ ಹಾಗೂ ಮಾರಾಟಕ್ಕೆ (ವಿ 5) ಮುಂದಾಗಿದ್ದು, ಶುಕ್ರವಾರ ಈ ಸಂಸ್ಥೆಯನ್ನು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಉದ್ಘಾಟಿಸಿದರು.
ನಿರಂತರವಾಗಿ ಪತ್ರಿಕೋದ್ಯಮದ ಜೊತೆಗೆ ಸ್ವಂತ ಉದ್ದಿಮೆಯನ್ನು ಆರಂಭಿಸಿದ ಗೋಪಾಲ್ ಯಡಗೆರೆಯವರ 25 ವರ್ಷದ ಶ್ರಮ ಈಗ ಈ ಬೆಳವಣಿಗೆಗೆ ಕಾರಣವಾಗಿದೆ, ನೂರಾರು ಯುವಕರಿಗೆ ಬದುಕು ಕಟ್ಟಿಕೊಡುವ ಇಂತಹ ಕಾರ್ಯ ಈಗಿನ ಯುವಕರಿಗೆ ಮಾರ್ಗದರ್ಶನವಾಗಲಿ ಎಂದು ಶುಭ ಹರಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ರಾಷ್ಟ್ರ ಭಕ್ತ ಬಳಗದ ಯುವನಾಯಕ ಕೆ.ಈ. ಕಾಂತೇಶ್, ಕರ್ನಾಟಕ ಬ್ಯಾಂಕ್ ನ ಎಜಿಎಂ ಸಂಜೀವ್ ಕುಲಕರ್ಣಿ, ರೀತ್ ರಾಜ್ ಹಾಗೂ ಇತರರು ಉಪಸ್ಥಿತರಿದ್ದರು.
ಈ ಮೂಲಕ ಮಲೆನಾಡು ಕೇಂದ್ರವಾದ ಶಿವಮೊಗ್ಗದಲ್ಲಿ ಹೊಸ ಉದ್ಯಮ ಕ್ಷೇತ್ರವೊಂದು ತಲೆ ಎತ್ತಿದೆ. ಈ ಉದ್ಯಮ ಸಾಗರ ರಸ್ತೆಯ ಬಿ ಎಸ್ ಎನ್ ಎಲ್ ಕಚೇರಿ ಬಳಿ ಶುಭಾರಂಭವಾಗಿದೆ
ಮಲೆನಾಡು, ಕರಾವಳಿ, ಮಧ್ಯ ಕರ್ನಾಟಕ ಹಾಗೂ ಉತ್ತರ ಕರ್ನಾಟಕದಲ್ಲಿ ಬಹುತೇಕ ಇಂತಹ ಪೂರ್ಣ ಪ್ರಮಾಣದಲ್ಲಿ ಗೃಹೋಪಯೋಗಿ ಉತ್ಪನ್ನಗಳ ತಯಾರಿಕೆಯ ಪ್ರಮುಖ ಉದ್ಯಮ ಸಂಸ್ಥೆಯಾಗಿ ಮೂಡಿ ಬರಲಿದೆ ಎಂದು ಸಂಸ್ಥೆಯ ರೂವಾರಿ ಗೋಪಾಲ್ ಯಡಗೆರೆ ತಿಳಿಸಿದರು.
ಆರಂಭದಲ್ಲಿ ಮಲೆನಾಡು, ಕರಾವಳಿ ಮತ್ತು ಮಧ್ಯ ಕರ್ನಾಟಕದ ಎಂಟು ಜಿಲ್ಲೆಗಳನ್ನು ಕೇಂದ್ರೀಕರಿಸಿದ್ದು, ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕ ಹಾಗೂ ಬೆಂಗಳೂರು, ಮೈಸೂರು ಭಾಗದಲ್ಲಿ ಮಾರುಕಟ್ಟೆ ವಿಸ್ತರಣೆಯಾಗಲಿದೆ ಎಂದ ಅವರು ಮುಂದಿನ ಐದು ವರ್ಷಗಳಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಾವಿರಾರು ಉದ್ಯೋಗ ಸೃಷ್ಟಿ ಕೂಡ ಆಗಲಿದೆ ಎಂದರು.
ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ , ಜಿ. ವಿಜಯ್‌ಕುಮಾರ್, ನಿಕಟಪೂರ್ವ ಅಧ್ಯಕ್ಷ ಎನ್.ಗೋಪಿನಾಥ್, ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್, ನಗರಸಭೆ ಮಾಜಿ ಅಧ್ಯಕ್ಷ ಎಲ್.ಸತ್ಯನಾರಾಯಣ ರಾವ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಆರ್.ಎಂ.ಮಂಜುನಾಥ್ ಗೌಡ, ಕೊಡಚಾದ್ರಿ ಪತ್ತಿ ಸಹಕಾರ ಸಂಘದ ಅಧ್ಯಕ್ಷ ಜಿ.ಎಂ.ಸುದೀರ್, ರಮೇಶ್ ಶಂಕರಘಟ್ಟ, ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ಕರ್ನಾಟಕ ಕಾರ್ಯನಿರತ ಸಂಘದ ಅಧ್ಯಕ್ಷ ವೈದ್ಯನಾಥ್, ರಾಜ್ಯ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಕಮ್ಮರಡಿ ಪ್ರಕಾಶ್, ರೈತ ಸಂಘದ ಮುಖಂಡ ಕೆ.ಟಿ.ಗಂಗಾಧರ್, ಪರಿಸರವಾದಿ ಜನಾರ್ಧನ್, ಉದ್ಯಮಿ ಶ್ರೀನಿ ವೆಂಕಟೇಶ್ ಮತ್ತಿತರರು ಇದ್ದರು.ಯಡಗೆರೆ ಎಂಟರ್ ಪ್ರೈಸಸ್ ಸಂಸ್ಥೆಯ ನಿರ್ದೇಶಕ ಗುರುದತ್ ಹೆಬ್ಬಾರ್ ಸ್ವಾಗತಿಸಿದರು.
