ಸರ್ಕಾರಿ ನೌಕರರ ಸಂಘದ ಚುನಾವಣೆ : ಸಿ.ಎಸ್. ಷಡಾಕ್ಷರಿ ಬಣ ಮೇಲುಗೈ

Kranti Deepa
ಶಿವಮೊಗ್ಗ,ನ.12 : ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ 66 ನಿರ್ದೇಶಕ ಸ್ಥಾನಗಳಿಗೆ 2024-29 ನೇ ಅವಗೆ ನಡೆಯುತ್ತಿರುವ ಚುನಾವಣೆಯಲ್ಲಿ ರಾಜ್ಯಘಟಕದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಬಣದ 38 ನಿರ್ದೇಶಕರು ಅವಿರೋಧವಾಗಿ ವಿವಿಧ ಇಲಾಖೆಗಳಿಂದ ಆಯ್ಕೆ ಯಾಗಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಮತ್ತೊಮ್ಮೆ ಹಾಲಿ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಬೆಂಬಲಿಗರು ಮೇಲುಗೈ ಸಾಸಿದ್ದಾರೆ.
ಜಿಲ್ಲಾ ಶಾಖೆಯ 66 ಸ್ಥಾನಗಳಿಗೆ ಅಕ್ಟೋಬರ್ 28 ರಿಂದ ನಾಮಪತ್ರ ಸಲ್ಲಿಕೆ ಕಾರ್ಯ ಬಿರುಸಿನಿಂದ ಆರಂಭಗೊಂಡಿತ್ತು. ನವೆಂಬರ್ 9 ರವರೆಗೆ ಒಟ್ಟು 168 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದರು.
ನವೆಂಬರ್ 11 ನಾಮಪತ್ರ ವಾಪಾಸಾತಿಗೆ ಕೊನೆಯ ದಿನವಾಗಿತ್ತು. ಈ ಸಂದರ್ಭದಲ್ಲಿ 38 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾದರು. ಇವರೆಲ್ಲರು ಗಳೂ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಬಣದವರಾಗಿದ್ದಾರೆ. ಉಳಿದ ಸ್ಥಾನಗಳಿಗೆ ನವೆಂಬರ್ 16 ರಂದು ಚುನಾವಣೆ ನಡೆಯಲಿದ್ದು, ಅದರಲ್ಲಿಯೂ ಸಹ ಷಡಾಕ್ಷರಿ ಬಣವೇ ಮೇಲುಗೈ ಸಾಸುತ್ತದೆ  ಎಂಬ ಅಭಿಪ್ರಾಯ ನೌಕರರ ವಲಯದಲ್ಲಿ ಕೇಳಿಬರುತ್ತದೆ.
ಅವಿರೋಧವಾಗಿ ಆಯ್ಕೆಯಾದವರು :
ಚೇತನ್ ಸಿ.ಬಿ.(ಕೃಷಿ ಇಲಾಖೆ ತಾಂತ್ರಿಕ ವೃಂದ), ಕೆ.ಆರ್.ರಾಮಪ್ಪ (ಪಶುಪಾಲನಾ ಇಲಾಖೆ)’, ಆರ್.ನವೀನ್ (ಆಹಾರ ಇಲಾಖೆ), ಸಿ.ರವಿ (ವಾಣಿಜ್ಯ ತೆರಿಗೆ ಇಲಾಖೆ), ಎಸ್.ಆರ್.ನರಸಿಂಹ ಮೂರ್ತಿ (ಸಹಕಾರ ಇಲಾಖೆ) ಪಿ.ವಿ.ಕೃಷ್ಣಾರೆಡ್ಡಿ (ಲೋಕೋಪಯೋಗಿ ಇಲಾಖೆ), ಆರ್. ಮೋಹನ್ ಕುಮಾರ್ ಹಾಗೂ ಜಿ.ಕೆ.ರುದ್ರಪ್ಪ ( ಜಲ ಸಂಪನ್ಮೂಲ ಇಲಾಖೆ), ಎಂ.ಬೊಮ್ಮಲಿಂಗಪ್ಪ (ಸಣ್ಣ ನೀರಾವರಿ ಇಲಾಖೆ), ಡಿ.ರವೀಂದ್ರ (ಕಾಡಾ), ಎನ್.ಮಂಜುಳಾ, ವಿ.ಪ್ರಭಾಕರ, ವಿ. ಲಕ್ಷ್ಮಣ(ವೈದ್ಯಕೀಯ ಶಿಕ್ಷಣ ಇಲಾಖೆ), ಆರ್.ಮಾರುತಿ (ವಾರ್ತಾ ಇಲಾಖೆ), ಎಸ್.ಆರ್.ನಾಗರಾಜ್(ಕೆಜಿಐಡಿ), ಹೆಚ್. ಶಾಂತಕುಮಾರ್, (ಮುದ್ರಾಂಕ ನೊಂದಣಿ ಇಲಾಖೆ), ಸಿ.ಎಂ.ಮಲ್ಲೇಶಪ್ಪ(ಸಾರಿಗೆ ಇಲಾಖೆ), ಡಿ.ಬಿ.ಸತೀಶ್ (ಎಸ್.ಪಿ.ಕಚೇರಿ), ಎಂ.ಸಿ. ಮನೋಜ್ (ರೇಷ್ಮೇ ಇಲಾಖೆ), ಕೆ.ಎಸ್.ಶ್ರೀಕಾಂತ್(ಲೆಕ್ಕಪತ್ರ ಇಲಾಖೆ), ಅಂತೋಣಿ ರಾಜು(ಕಾರಾಗೃಹ ಇಲಾಖೆ), ಆರ್.ಪಿ.ಚಿದಾನಂದ್(ಖಜಾನೆ ಇಲಾಖೆ) ಎ.ಟಿ.ಕಾಂತರಾಜ್(ನಗರ/ಗ್ರಾಮಾಂತರ ಯೋಜನಾ ಶಾಖೆ), ಕೆ.ಕೆ.ಕೃಷ್ಣಮೂರ್ತಿ(ಉದ್ಯೋಗ ತರಬೇತಿ, ಕೌಶಲ್ಯಾಭಿವೃದ್ದಿ ಇಲಾಖೆ), ಸಿ.ಎಂ.ಧನಲಕ್ಷ್ಮಿ (ಧಾರ್ಮಿಕ ದತ್ತಿ ಇಲಾಖೆ) ಡಿ.ಗಜಾನನ, ಆರ್.ಪಾಪಣ್ಣ (ನ್ಯಾಯಾಂಗ ಇಲಾಖೆ), ಜಿ.ಆರ್.ಬಸವರಾಜಪ್ಪ (ನಿಗಮಮಂಡಳಿ) ಎಸ್.ಬಿ. ಶ್ರೀನಿವಾಸ್ (ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ , ಜಿ.ರಾಜೇಶ್( ಕೆಎಸ್‌ಐಎಸ್‌ಎಫ್), ಬಿ.ಉಮೇಶ್ ಕುಮಾರ್ (ಜಿಲ್ಲಾಕಾರಿ ಕಚೇರಿ) ಐ.ಬಿ.ಮೋಹನ್ ಕುಮಾರ್(ಕಂದಾಯ ಇಲಾಖೆ) ಜಿ.ಎಂ.ಹರೀಶ್(ಆರ್ಥಿಕ ಇಲಾಖೆ) ಆರ್.ಡಿ.ಕುಮಾರ್(ತೋಟಗಾರಿಕಾ ಇಲಾಖೆ )
ಹಿಂದಿನ ಅವಯಲ್ಲಿ ನಾವು ಮಾಡಿರುವಂತಹ ನೌಕರರ ಪರವಾದ ಕೆಲಸಗಳು, ಅನೇಕ ವರ್ಷಗಳಿಂದ ಬಾಕಿ ಉಳಿದಿದ್ದ ಸಮಸ್ಯೆಗಳನ್ನು ಸರ್ಕಾರದೊಂದಿಗೆ ಮಾತುಕತೆ ನಡೆಸಿ ಸೌಹಾರ್ದಯುತವಾಗಿ ಬಗೆಹರಿಸಲಾಗಿದ್ದು, ಇದೆಲ್ಲವನ್ನು ಗಮನಿಸಿದ ನಮ್ಮ ನೌಕರರ ಸಮೂಹ ಜಿಲ್ಲೆಯಲ್ಲಿ ಅರ್ಧಕ್ಕೂ ಅಕ ಸಂಖ್ಯೆಯ ನಿರ್ದೇಶಕರನ್ನು ವಿವಿಧ ಇಲಾಖೆಗಳ ಜಿಲ್ಲಾ ಶಾಖೆಗೆ ಅವಿರೋಧವಾಗಿ ಆಯ್ಕೆ ಮಾಡಿದೆ. ಇದಕ್ಕಾಗಿ ನೌಕರರ ಸಮೂಹಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
-ಸಿ.ಎಸ್.ಷಡಾಕ್ಷರಿ,
ನೌಕರರ ಸಂಘದ ರಾಜ್ಯಾಧ್ಯಕ್ಷ 

Share This Article
";