ಮಂಡ್ಯ, ಮೇ .26 : ಜಿಲ್ಲೆಯ ಮಳವಳ್ಳಿ ತಾಲೂಕಿನ ನೆಟ್ಕಲ್ ಗ್ರಾಮದ ಬೆಂಗಳೂರು ಜಲಮಂಡಳಿ ನೀರು ಸರಬರಾಜು ಮಾಡುವ ಪೈಪ್‌ಲೈನ್ ಬಳಿ ಬೃಹತ್ ಗಾತ್ರದ ಹೆಬ್ಬಾವೊಂದು ಪತ್ತೆಯಾಗಿದೆ. ಸುಮಾರು 10 ಅಡಿ ಉದ್ದ ಹಾಗೂ 30 ಕೆ.ಜಿಗೂ ಹೆಚ್ಚು ತೂಕವಿರುವ ಈ ಹೆಬ್ಬಾವು, ಜಿಂಕೆಯೊಂದನ್ನು ಸಂಪೂರ್ಣವಾಗಿ ನುಂಗಿ, ಮುಂದೆ ಹೋಗಲಾರದೆ ಒಂದೇ ಕಡೆ ಮಲಗಿತ್ತು.
ಇದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಉರಗ ತಜ್ಞರು ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆ ಹಿಡಿದು, ಮುತ್ತತ್ತಿ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಬಿಟ್ಟರು.
