ಶಿವಮೊಗ್ಗ : ಕರ್ನಾಟಕಕ್ಕೆ ಮೂರು ಹೊಸ ವಂದೇ ಭಾರತ್ ರೈಲು ಬರೋದು ಖಚಿತವಾಗಿದೆ. ಇದರಲ್ಲಿ ಒಂದು ರೈಲು ಶಿವಮೊಗ್ಗ ಮಾರ್ಗದಲ್ಲಿ ಓಡಾಡಲಿದೆ ಎಂದು ಸಂಸದ ಬಿವೈ ರಾಘವೇಂದ್ರ ಹೇಳಿದ್ದಾರೆ.
ಈ ಬಗ್ಗೆ ಸಂಸದ ಬಿವೈ ರಾಘವೇಂದ್ರ ಮಾತನಾಡಿದ್ದು, ಕರ್ನಾಟಕಕ್ಕೆ ಹೊಸದಾಗಿ ಮೂರು ವಂದೇ ಭಾರತ್ ರೈಲು ಬರಲಿದೆ. ಅದರಲ್ಲಿ ಒಂದು ಶಿವಮೊಗ್ಗ ಮಾರ್ಗದಲ್ಲಿ ಸಂಚಾರ ಮಾಡುವ ಪ್ರಸ್ತಾಪವವಿದೆ ಎಂದು ಎಂದು ಕೇಂದ್ರ ಸಚಿವ ಸೋಮಣ್ಣ ತಿಳಿಸಿದ್ದಾರೆ ಎಂದು ಬಿವೈ ರಾಘವೇಂದ್ರ ಹೇಳಿದ್ದಾರೆ.
ಶಿವಮೊಗ್ಗ ವಿಮಾನ ನಿಲ್ದಾಣ ಅಂತರಾಷ್ಟಿಯ ವಿಮಾನ ನಿಲ್ದಾಣವಾಗುವ ಎಲ್ಲಾ ರೀತಿಯ ಸವಲತ್ತುಗಳನ್ನು ಹೊಂದಿದೆ ಮುಂದಿನ ದಿನಗಳಲ್ಲಿ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಲಾಗುವುದು. ಕೋಟೆ ಗಂಗೂರಿನಲ್ಲಿ ರೈಲ್ವೆ ಸರ್ವಿಸ್ ಕೇಂದ್ರವನ್ನ ಶೀಘ್ರದಲ್ಲಿ ಆರಂಭ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.