ವಚನಗಳ ಮೂಲ ತತ್ವ ಅರಿಯಬೇಕು

Kranti Deepa

ಶಿವಮೊಗ್ಗ ,ನ.05 :ವಚನಗಳ ಮೂಲತತ್ವದ ಅರಿವಿಲ್ಲದೇ ಪ್ರಸ್ತುತ ದಿನಮಾನಗಳಲ್ಲಿ ನಾವುಗಳು ಏನೇನೋ ಮಾಡುತ್ತಿ ದ್ದೇವೋ ಎಂದು  ಬೆಂಗಳೂರು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಬೇಸರ ವ್ಯಕ್ತಪಡಿಸಿದರು.

ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಚಿಂತನ ಕಾರ್ತಿಕ ಉಪನ್ಯಾಸ ಮಾಲಿಕೆ ಉದ್ಘಾಟಿಸಿ ಮಾತನಾಡಿದ ಅವರು, ವಚನಗಳ ಒಂದು ಸಾಲು ಪ್ರತಿಯೊಬ್ಬನ ಬದುಕಿನ ನೆರವಾಗುತ್ತದೆ. ಆದ್ದರಿಂದ ವಚನಗಳ ಸಾರವನ್ನು ಅರಿಯುವಂತಹ ಕೆಲಸವಾಗ ಬೇಕಾಗಿದೆ ಎಂದು ಹೇಳಿದರು.

ಬಸವೇಶ್ವರರು ಏನು ಮಾಡಿದರು ಎಂಬುದನ್ನು ನಾವಿಂದು ತಿಳಿದುಕೊಳ್ಳಬೇಕಿದೆ. ನಾವು ಬಸವಣ್ಣ ನವರ ಸಮಾಜದಲ್ಲಿ ಹುಟ್ಟಿದ್ದೇವೆ ಎಂಬ ಕಾರಣಕ್ಕೆ ಅವರ ಬಗ್ಗೆ ತಿಳಿಯಬೇಕು ಎಂದೇನಿಲ್ಲ. ನಾವು ನೋಡುವ ದೃಷ್ಟಿಕೋನ ಬದಲಾಗಬೇಕು. ಬಸವಣ್ಣ ಕೇವಲ ಕರ್ನಾಟಕಕ್ಕೆ ಸೀಮಿತವಾಗಬಾರದು ಎಂದರು.

ಕಳೆದ 25 ವರ್ಷಗಳಿಂದ ನಿರಂತರವಾಗಿ ಬಸವ ತತ್ವಗಳನ್ನು ಮನನ ಮಾಡಿಕೊಳ್ಳುವ ಪ್ರಯತ್ನದಲ್ಲಿ ದ್ದೇನೆ. ಬಸವಣ್ಣನನ್ನು ಅರ್ಥೈಸಿಕೊಳ್ಳಲು ಇಷ್ಟು ವರ್ಷ ಬೇಕಾಯಿತೇ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ. ಬಸವಣ್ಣನವರ ಜೀವನವನ್ನು ನಾವು ಹೇಗೆ ಗ್ರಹಿಸುತ್ತೇವೆ ಎಂಬ ಪ್ರಶ್ನೆ ಇಂದಿಗೂ ಇದೆ ಎಂದರು.

ಬಸವಕೇಂದ್ರದ ಶ್ರೀಗಳ ದೃಷ್ಟಿಕೋನ ವಿಭಿನ್ನವಾಗಿದೆ. ಹಲವು ಬಗೆಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಇಂತಹ ಮಹಾತ್ಮರನ್ನು ಇರಿಸಿ ಕೊಂಡು ನಾವು ಬಸವಣ್ಣನವರ ವಚನಗಳ ಸಾರವನ್ನು ಹೆಚ್ಚು ಪ್ರಚಾರ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದು ಬೇಸರದ ಸಂಗತಿಯಾಗಿದೆ ಎಂದ ಅವರು, ಬಸವಕೇಂದ್ರದ ಶ್ರೀಗಳು ವಿವೇಕಾನಂದರ ಸ್ವರೂಪದಲ್ಲಿ ಕಾಣುತ್ತಾರೆ ಎಂದು ಹೇಳಿದರು.

ಸಮಾರಂಭದಲ್ಲಿ ಮೊಹರೆ ಹಣಮಂತರಾಯ ಪ್ರಶಸ್ತಿಪುರಸ್ಕೃತ ಎನ್.ಮಂಜುನಾಥ್, ರಂಗಾಯಣ ನಿರ್ದೇಶಕ ಪ್ರಸನ್ನ ಸಾಗರ, ಶಿಕ್ಷಣ ಕ್ಷೇತ್ರದ ಡಾ. ಜಿ.ವಿ.ಹರಿಪ್ರಸಾದ್, ಪತ್ರಕರ್ತ ಚಂದ್ರಹಾಸ್ ಹಿರೇಮಳಲಿ ಇವರುಗಳನ್ನು ಸನ್ಮಾನಿಸಲಾಯಿತು.

ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಸವಕೇಂದ್ರದ ಅಧ್ಯಕ್ಷ ಜಿ.ಬೆನಕಪ್ಪ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಜಯಾಶೇಖರ್, ವಿದ್ಯುತ್ ನೌಕರರ ಸಂಘದ ಟಿ.ಇ.ಚಂದ್ರಕಲಾ  ಉಪಸ್ಥಿತರಿದ್ದರು.

ಶಿವಮೊಗ್ಗ ಜಿಲ್ಲೆ ಬಸವ ಪರಂಪರೆಗೆ ಭದ್ರ ಬುನಾದಿ ಹಾಕಿದೆ. ವಿಶ್ವ ಮಾನವ ಸಂದೇಶ ಸಾರುವ ವಚನಗಳನ್ನು  ತಿಳಿಸುವ ಕಾರ್ಯವನ್ನು ಮಾಡಬೇಕಾಗಿದೆ.ಬಸವಣ್ಣನವರು ಅಂದು ಏನನ್ನು ಽಕ್ಕರಿಸಿದ್ದರೋ ಪ್ರಸ್ತುತ ದಿನಮಾನಗಳಲ್ಲಿ ಅದನ್ನೇ ಒಪ್ಪಿಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ.

-ಎನ್.ಮಂಜುನಾಥ್,
ಕ್ರಾಂತಿದೀಪ ಪತ್ರಿಕೆ ಸಂಪಾದಕ

Share This Article
";